ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ,2025-26 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆ.
ವಿದ್ಯಾರ್ಥಿ ಸಂಸತ್ತಿನ ರಚನೆಯ ಅಂಗವಾಗಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಚಾರದೊಂದಿಗೆ ಮತದಾನವು ನಡೆಯಿತು.
ವಿದ್ಯಾರ್ಥಿ ಸಂಘದ ನಾಯಕರಾಗಿ ತನಿಷ್‌ಆರ್ ಶೆಟ್ಟಿಗಾರ್ 10 ನೇತರಗತಿ, ಉಪನಾಯಕನಾಗಿ ಯದ್ವಿತ್ 9ನೇತರಗತಿ, ಯೋಜನಾಧಿಕಾರಿಯಾಗಿ ಅನುಷ್ಕ ಶೆಟ್ಟಿ, 10 ನೇ ತರಗತಿ ಅವರು ಆಯ್ಕೆಯಾದರು.
ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಶ್ರೀಯುತ ಹರಿಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರೀದೇವಿ ಪಿ. ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವೀಣಾ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು.