ನ್ನಡದ ಖ್ಯಾತ ನಟ ಅನಂತ್ ನಾಗ್ ಅವರಿಗೆ ಇಂದು (ಮೇ 27) ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಿನಿಮಾರಂಗದಲ್ಲಿ ಸಾಧನೆ ಮಾಡಿದ ಅನಂತ್ ನಾಗ್ ಅವರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿ (Padma Bhushan Award 2025) ನೀಡಿ ಗೌರವಿಸಲಾಯಿತು.  ಇದನ್ನೂ ಓದಿ : ಪುತ್ತೂರು : ಖಾಸಗಿ ಬಸ್, ಕಾರು ನಡುವೆ ಅಪಘಾತ – ತಂದೆ, ಮಗಳಿಗೆ ಗಂಭೀರ ಗಾಯ

ಹಲವು ವರ್ಷಗಳಿಂದ ಅನಂತ್ ನಾಗ್‌ಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಕನ್ನಡಿಗರು ಆಶಿಸಿದ್ದರು. ಇದೀಗ ಹಿರಿಯ ನಟನಿಗೆ ಸಿಕ್ಕಿರುವ ಪ್ರಶಸ್ತಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ :  ಒಂಟಿ ಮಹಿಳೆಯ ಹತ್ಯೆ – ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಹಂತಕ ಎಸ್ಕೇಪ್