ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಫ್ರೆಂಡ್ಸ್ ವೀರಕಂಬ ಇವರ ನೇತೃತ್ವದಲ್ಲಿ “ವೀರಕಂಬ ಪ್ರೀಮಿಯರ್ ಲೀಗ್ -2024 ” ಐದನೇ ಆವೃತ್ತಿ ಕ್ರಿಕೆಟ್ ಪಂದ್ಯಾಟ ವೀರಕಂಬ ಗ್ರಾಮದ ನಂದನ ತಿಮಾರು ಕ್ರೀಡಾಂಗಣದಲ್ಲಿ ಜರಗಿತು.

ಪಂದ್ಯಾಟವನ್ನು ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ನಾರುಕೋಡಿ ದ್ವೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಸತತ 5 ಆವೃತ್ತಿಗಳ  ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ತಮ್ಮ ಸ್ವಂತ ಜಾಗವನ್ನು ನೀಡುತ್ತಿದ್ದ ಸ್ಥಳದ ಮಾಲಕರಾದ ಮಾಜಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು ನಂದನತಿಮರ್ ಇವರನ್ನು ಎಲ್ಲಾ ಕ್ರೀಡಾಭಿಮಾನಿಗಳ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಬಿಲ್ಲವ ಸಂಘ ವೀರಕಂಬ ಗ್ರಾಮ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಯುವಶಕ್ತಿ ಫ್ರೆಂಡ್ಸ್ ವೀರಕಂಬ ಅಧ್ಯಕ್ಷ ಜಗದೀಶ್ ವಿ, ಗಿಳಿಕಿಂಜತಾಯ ದೇವಸ್ಥಾನದ ಪರಿಚಾರಕರಾದ ದಿನೇಶ್ ಸಫಲ್ಯ ಗುಡ್ಡೆತೋಟ, ವೀರಕಂಬ ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿಶಾಂತ್ ರೈ, ದಿನೇಶ್ ಪೂಜಾರಿ,ಪಾಂಚಜನ್ಯ ಅರ್ಥ್ ಮೂವರ್ಸ್ ನ ಪ್ರಶಾಂತ್, ಪ್ರಮುಖರಾದ ವೇಣುಗೋಪಾಲ್ ವೀರಕಂಭ ಮೊದಲಾದವರು ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ವೃಷಭ ವಾರಿಯರ್ಸ್, ದ್ವಿತೀಯ ಸ್ಥಾನವನ್ನು ಸಾಯಿ ನೈನ್, ತೃತೀಯ ಸ್ಥಾನವನ್ನು ಅಯೋಧ್ಯ ತಂಡಗಳು ಕ್ರಮವಾಗಿ ಪಡೆದುಕೊಂಡವು.