ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆ ವೀರಕಂಬ ಗ್ರಾಮ ಪಂಚಾಯತಿನಲ್ಲಿ ಪಂಚಾಯತ್ ಅಧ್ಯಕ್ಷ ಲಲಿತಾ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯ ಪ್ರಾರಂಭಕ್ಕೆ ಮೊದಲು ಇತ್ತೀಚೆಗೆ ನಿಧನರಾದ ಗ್ರಾಮ ಪಂಚಾಯತ್ ಸದಸ್ಯ ರಘು ಪೂಜಾರಿಯವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವೀರಕಂಭ ಗ್ರಾಮ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಮಳೆಗಾಲದಲ್ಲಿ ಆಗುವ ಆರೋಗ್ಯ ಸಮಸ್ಯೆ,ಹಾಗೂ ಗ್ರಾಮ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ , ವೀರಕಂಭ ಗ್ರಾಮವನ್ನು ಕ್ಷಯ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೈರ್ಮಲ್ಯ ಸಮಿತಿಯ ಸದಸ್ಯರು ಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ : ಜವಾಹರ್ ಬಾಲ್ ಮಂಚ್ ಇದರ ಹೊಸ ಯೂಟ್ಯೂಬ್ ಚಾನೆಲ್ ಜೆ ಬಿ ಎಮ್ ಟಿವಿ (JBM tv )ಲಾಂಚ್ ಬಿಡುಗಡೆ

ಸಭೆಯಲ್ಲಿ ಪಂಚಾಯತ್ ಅಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರಾದ ಅಬ್ದುಲ್ ರಹಿಮಾನ್, ದಿನೇಶ್ ಪೂಜಾರಿ, ಜಯಪ್ರಸಾದ್, ಜಯಂತಿ,ಮೀನಾಕ್ಷಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ , ಆಶಾ ಕಾರ್ಯಕರ್ತರಾದ ಸ್ನೇಹ ಶೆಟ್ಟಿ,ಕೋಮಲಾಕ್ಷಿ, ಲೀಲಾವತಿ, ಮೊದಲಾದವರು ಉಪಸ್ಥಿತರಿದ್ದರು.