ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ದಿ ಮತ್ತು ಸಂಶೋಧನಾ ಸಂಸ್ಥೆ ಇದರ ದಶಮಾನೋತ್ಸವ ಸಂಭ್ರಮ ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ವಕೀಲರು ಮತ್ತು ಸಂಧಾನಕಾರರು ಗೌರಿ ಶ್ರೇಯಸ್ ಇವರಿಂದ ಕಾರ್ಯಾಗಾರ ನಡೆಯಿತು.
ನ್ಯಾಯವಾದಿಗಳು, ಪ್ರತಿಷ್ಠಿತ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.)ಬಾಳ್ತಿಲ ಸಂಸ್ಥಾಪಕರಾದ ಶೈಲಜಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್ ಶೆಟ್ಟಿ ಪುಳಿಂಚ ವಕೀಲರು, ಮಂಗಳೂರು, ಬೆಳ್ತಂಗಡಿ ತಾ.ಮುಂಡಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಾಲಿ, ಬೆಳ್ತಂಗಡಿ ತಾ.ರಬ್ಬರ್ ಬೆಳೆಗಾರರ ಸಹಕಾರಿ ಸಂಘ(ರಿ) ಅಧ್ಯಕ್ಷ ಶ್ರೀಧರ್ ಜಿ.ಭಿಡೆ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಮೂತ್ರರೋಗ ತಜ್ಞರು ಮತ್ತು ಡಾ.ಬಿ.ಸಿ.ರಾಯ್ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಡಾ| ಸದಾನಂದ ಪೂಜಾರಿ, ಬೆಂಗಳೂರು ಹೈಕೋರ್ಟ್ ವಕೀಲರಾದ ನವನೀತ್, ಬಿ.ಸಿ ರೋಡು ಅರಿವಳಿಕೆ ತಜ್ಞರು ಡಾ| ಶಶಿಕಲಾ ಸೋಮಯಾಜಿ, ಕುಂದಾಪುರ ತಾ.ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ರಾಧಾದಾಸ್, ಕಡಬ ಕಾಮಧೇನು ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಉಷಾ ಅಂಚನ್, ಮೂಡಬಿದಿರೆ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಕೇಶವ, ಜೆ.ಸಿ.ಐ ಬಂಟ್ವಾಳ ಘಟಕದ ಅಧ್ಯಕ್ಷೆ ರಶ್ಮಿ ವಚನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ. ಯನ್ನು ಕಳೆದ 10 ವರ್ಷಗಳ ಹಿಂದೆ ನ್ಯಾಯವಾದಿ ಶೈಲಜಾ ರಾಜೇಶ್‌ರವರ ತಾಯಿ ಶ್ರೀಮತಿ ಗಿರಿಜಾ ಇವರು ಉದ್ಘಾಟನೆಯನ್ನು ನೆರವೇರಿಸಿದ್ದು ಅವರ ಸ್ಮರಣಾರ್ಥವಾಗಿ ಸಾಧಕ ಮಹಿಳೆಯರಿಗೆ “ಗಿರಿಜಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಕ್ಯಾನ್ಸರ್ ಪೀಡಿತ, ನಿರಾಶ್ರಿತರಿಗೆ, ಅಸಹಾಯಕ ಮಹಿಳೆಯರಿಗೆ ಧನಸಹಾಯ ನೀಡಲಾಯಿತು. ಹಾಗೂ “ನವದುರ್ಗಾ ಶಕ್ತಿ” ಅಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಗಂಟೆ 2 ಕ್ಕೆ ಕಾನೂನು, ಸಮಾಜ, ಕುಟುಂಬ, ಅಮಲು ಪದಾರ್ಥ, ಆರೋಗ್ಯ, ಸಾಮಾಜಿಕ ಜಾಲತಾಣ ಇದರ ಬಗ್ಗೆ “ಮುಕ್ತ ಸಂವಾದ” ಕಾರ್ಯಕ್ರಮ ನಡೆಯಿತು
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ ರಮಾನಾಥ ರೈ, ಮೊಡಂಕಾಪು ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ರೆ|ಫಾ| ವಲೇರಿಯನ್ ಎಸ್.ಡಿ ಸೋಜ, ಬಿ.ಸಿ ರೋಡು ನೋಟರಿ ವಕೀಲರಾದ ಅಶ್ವನಿ ರೈ, ವಿಜಯಲಕ್ಷ್ಮೀ ಕಟೀಲು ಶಿಕ್ಷಕರು ಮತ್ತು ಸಾಹಿತಿ ಸರಕಾರಿ ಪ್ರೌಢಶಾಲೆ, ಮಂಚಿ ಕೊಳ್ನಾಡು, ಇರಾ ಬಿಲ್ಲವ ಸಂಘ ಅಧ್ಯಕ್ಷ ಜಯರಾಮ್ ಪೂಜಾರಿ ಇರಾ, ಬಿ.ಸಿ.ರೋಡು ಬಿಲ್ಲವ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ಡಿ.ದೇರಾಜೆಗುತ್ತು, ಉಪ್ಪಿನಂಗಡಿ ದಂತ ವೈದ್ಯರಾದ ಡಾ| ರಾಜಾರಾಮ್, ಮೆಲ್ಕಾರ್ ಶಿವಗಿರಿ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾ ವಿ.ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ತುಂಗಪ್ಪ ಬಂಗೇರ, ಕೈಕಂಬ ಸಾಯಿಲೀಲಾ ಹೋಟೆಲ್ ಮಾಲಕ ಸದಾನಂದ ಬಂಗೇರ, ವಿಜಯ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಬೇಬಿ ಕುಂದರ್, ಮೊದಲಾದವರು ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.
ಸಂಜೆ “ಶ್ರೀಶೈಲ ಕಲಾ” ನೃತ್ಯ ತಂಡದಿಂದ ವೈವೀಧ್ಯಮಯ ನೃತ್ಯಾವಳಿ ಸಾಂಸ್ಕೃತಿಕ ವೈಭವ ನಡೆಯಿತು.