ಇತ್ತೀಚೆಗೆ ಮದುವೆಯಾದ ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಪತಿ ಅನುಕೂಲ್ ಮಿಶ್ರಾ ಜೊತೆಗೂಡಿ ಬಂಗೀ ಜಂಪ್ ಮಾಡಿದ್ದಾರೆ.
ಉತ್ತರಾಖಂಡ ಋಷಿಕೇಶ ಬಳಿ ಇರುವ ಶಿವಪುರಿಯಲ್ಲಿ ಹಿಮಾಲಯನ್ ಬಂಗೀಯಲ್ಲಿ ದಂಪತಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ. ಈ ಹಿಂದೆ ಅನುಕೂಲ್ ಮಿಶ್ರಾ ಅವರು ಒಬ್ಬರೇ ಬಂಗೀ ಜಂಪ್ ಮಾಡಿದ್ದರು. ಈಗ ಪತ್ನಿ ವೈಷ್ಣವಿ ಜೊತೆಗೆ ಬಂಗೀ ಜಂಪ್ ಮಾಡಿದ್ದಾರೆ.ಇದನ್ನೂ ಓದಿ : ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ
ಹಿಮಾಲಯನ್ ಬಂಗೀ, ಹಿಮಾಲಯನ್ ಫ್ರೀಸ್ಟೈಲ್ ಬಂಗೀ, ಹಿಮಾಲಯನ್ ಜೋಡಿ ಬಂಗೀ ಹೆಸರಿನಲ್ಲಿ ಇಲ್ಲಿ ಜಂಪ್ ಮಾಡಬಹುದು. ದಂಪತಿ 111 ಮೀಟರ್ ಎತ್ತರದಿಂದ ಜಂಪ್ ಮಾಡಬೇಕಾಗುತ್ತದೆ. ಈ ಜೋಡಿ ಬಂಗೀ ಜಂಪಿಗೆ ಇಬ್ಬರಿಗೆ ಸೇರಿ 8,000 ರೂ. ಶುಲ್ಕ ವಿಧಿಸಲಾಗುತ್ತದೆ.
ಆರೋಗ್ಯ ಹೊಂದಿರುವ 14 – 99 ವರ್ಷದ ಒಳಗಿನ ವ್ಯಕ್ತಿಗಳು ಬಂಗೀ ಜಂಪ್ ಮಾಡಬಹುದು. ಪ್ರತಿ ವ್ಯಕ್ತಿಗೆ 45 – 120 ಕೆಜಿ ತೂಕದ ಒಳಗಿರಬೇಕು. ಜೋಡಿಯಾಗಿ ಹಾರುವಾಗ ಗರಿಷ್ಠ ಒಟ್ಟು ತೂಕ 205 ಕೆಜಿ ಮೀರಬಾರದು.
ಗರ್ಭಿಣಿಯರು, ಹೃದಯದ ಸಮಸ್ಯೆ ಹೊಂದಿರುವವರು, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು. ಮೂಳೆ ಸಮಸ್ಯೆ ಹೊಂದಿರುವವರು, ಜಿಗಿತದ ಮೊದಲು ಮದ್ಯ ಸೇವನೆ ಮಾಡಿದವರಿಗೆ ಬಂಗೀ ಬಂಗೀ ಜಂಪ್ ಮಾಡಲು ನಿರ್ಬಂಧವಿದೆ.