ಮಹಾರಾಷ್ಟ್ರ ಪುಣೆಯಲ್ಲಿರುವ ಬಂಟರ ಭವನಕ್ಕೆ ವಿಧಾನ ಸಭೆಯ ಸ್ಪೀಕರ್‌ ಯು.ಟಿ.ಖಾದರ್ ಭೇಟಿ ನೀಡಿ ಬಂಟರ ಭವನದ ಸೌಂದರ್ಯವನ್ನು ವೀಕ್ಷಣೆ ಮಾಡಿದರು.

ಬಳಿಕ ಮಾತನಾಡಿ ಕರಾವಳಿಯ ಬಂಟರ ಮೇಲಿರುವ ಅಭಿಮಾನ ಮತ್ತು ಗೌರವ ಇನ್ನಷ್ಟು ಹೆಚ್ಚಾಯಿತು. ಸಹೋದರತೆ, ಪ್ರೀತಿ, ಭಕ್ತಿ, ಪರಿಶ್ರಮ, ಒಗ್ಗಟ್ಟು ಈ ಭವನದ ಪ್ರತಿಯೊಂದು ಕಡೆಗಳಲ್ಲೂ ಎದ್ದು ಕಾಣುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಉಪಾದ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ಅಜಿತ್ ಹೆಗ್ಡೆ ಹಾಗೂ ಸದಸ್ಯ ವಸಂತ್ ಶೆಟ್ಟಿ ಉಪಸ್ಥಿತರಿದ್ದರು.