ಮೈಸೂರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ತಪೋ ಭೂಮಿ ಸುತ್ತೂರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಹಾಗೂ ನೂತನ ಅತಿಥಿ ಗೃಹವನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಷಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಆಧ್ಯಾತ್ಮಿಕ ಹಾಗೂ ಸಾಹಿತ್ಯ ಕ್ಷೇತ್ರ ಹಾಗೂ ಸಾಮಾಜಿಕ ಕ್ರಾಂತಿಗೆ ಕರ್ನಾಟಕ ಕೊಟ್ಟಷ್ಟು ಕೊಡುಗೆ ಜಗತ್ತಿನ ಯಾವ ಭಾಗದಲ್ಲಿಯೂ ಕೊಡಮಾಡಲಾಗಿಲ್ಲಾ ಎನ್ನುವುದು ನಮ್ಮ ಹೆಮ್ಮೆ. ಅದರಲ್ಲಿಯೂ ಮಹಾನ್ ಆಧ್ಯಾತ್ಮಿಕ ಚಟುವಟಿಕೆಯ ಶ್ರೀಮಠವಾಗಿ ಜ್ಞಾನ ಮತ್ತು ಶಿಕ್ಷಣದ ದಾಸೋಹವನ್ನು ಕರ್ನಾಟಕದ ತುಂಬೆಲ್ಲಾ ಪಸರಿಸಿ, ಭಾರತದ ಹಲವೆಡೆಗಳಲ್ಲಿ ವಿಸ್ತರಿಸಿ ಪ್ರಪಂಚದ ಹಲವು ದೇಶಗಳಲ್ಲೂ ತನ್ನ ಸೇವೆ ಮತ್ತು ಸಾಧನೆಯನ್ನು ಕೈಗೊಂಡಿರುವ ಸುತ್ತೂರು ಶ್ರೀಮಠದ ಕಾರ್ಯವನ್ನು ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಕೇಂದ್ರ ಸಚಿವರಾದ ಶ್ರೀ ಪ್ರಹಲ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷ ನಾಯಕರಾದ ಶ್ರೀ ಆರ್. ಅಶೋಕ, ಮಾಜಿ ಸಚಿವರಾದ ಶ್ರೀ ಸಿ.ಟಿ.ರವಿ, ಸಂಸದರಾದ ಶ್ರೀ ಪ್ರತಾಪ್ ಸಿಂಹ, ಮಾಜಿ ಸಂಸದರಾದ ಶ್ರೀ ಪ್ರಭಾಕರ್ ಕೋರೆ, ಶ್ರೀಮಠದ ಗಣ್ಯರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.