ಉಡುಪಿಯು ಧರ್ಮ, ಸಹಾನುಭೂತಿ ಮತ್ತು ಸಾಮಾಜಿಕ ಉನ್ನತಿಯಲ್ಲಿ ಆಳವಾಗಿ ಬೇರೂರಿರುವ ಸ್ಥಳ ಎಂದು ಪ್ರದಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
“ಗೀತೆಯಿಂದ ಪ್ರೇರಿತರಾಗಿ, ನಮ್ಮ ವರ್ತಮಾನ ಮತ್ತು ಭವಿಷ್ಯದ ಒಳಿತಿಗಾಗಿ ಈ ಒಂಬತ್ತು ಸಂಕಲ್ಪಗಳನ್ನು ಮಾಡುವಂತೆ ನಾನು ನಿಮ್ಮೆಲ್ಲರನ್ನು ವಿನಮ್ರವಾಗಿ ಕೋರುತ್ತೇನೆ…”
“ಭಗವಾನ್ ಶ್ರೀ ಕೃಷ್ಣ ಬಡವರಿಗೆ ಸಹಾಯ ಮಾಡುವ ಮಾರ್ಗವನ್ನು ನಮಗೆ ಕಲಿಸಿದ್ದಾರೆ. ಆ ಮನೋಭಾವವೇ ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಇನ್ನೂ ನಮ್ಮ ಅನೇಕ ಉಪಕ್ರಮಗಳಿಗೆ ಸ್ಫೂರ್ತಿಯಾಗಿದೆ.”
“ಗೀತೆಯ ಭವ್ಯ ಮತ್ತು ದಿವ್ಯ ಲಕ್ಷ ಕಂಠ ಪಠಣವು ಎಲ್ಲರಲ್ಲೂ ಶಕ್ತಿ ಮತ್ತು ಆಳವಾದ ಭಕ್ತಿಯನ್ನು ತುಂಬಿತು. ಇಷ್ಟೊಂದು ದೊಡ್ಡ ಜನಸಮೂಹವು ಏಕಸ್ವರದಲ್ಲಿ ಗೀತಾ ಪಠಣ ಮಾಡುವುದನ್ನು ನೋಡುವುದು ಮರೆಯಲಾಗದ ಕ್ಷಣವಾಗಿತ್ತು.”
“ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಇಂದಿನ ಭೇಟಿ ಅತ್ಯಂತ ವಿಶೇಷವಾಗಿತ್ತು. ಗೀತಾ ಪಠಣವು ಅವಿಸ್ಮರಣೀಯ ಅನುಭವವಾಗಿತ್ತು. ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿ, ಕನಕನ ಕಿಂಡಿಗೆ ಕನಕ ಕವಚವನ್ನು ಸಮರ್ಪಿಸಲಾಯಿತು. ಕನಕನ ಕಿಂಡಿಯಿಂದ ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಕನಕದಾಸರಿಗೆ ನಮನ ಸಲ್ಲಿಸುವುದು ಕೂಡ ಒಂದು ಗೌರವವಾಗಿತ್ತು.”
“ಉಡುಪಿಯ ಶ್ರೀ ಕೃಷ್ಣ ಮಠದ ಕೆಲವು ನೋಟಗಳು ಇಲ್ಲಿವೆ.”





