ಪ್ರಪಂಚದೊಂದಿಗೆ ಭಾರತದ ವ್ಯವಹಾರಗಳನ್ನು ಗಾಢಗೊಳಿಸಲು ಭಾರತೀಯ ವಲಸಿಗ ಸಮುದಾಯದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅವರನ್ನು ಶ್ಲಾಘಿಸಿದರು.

“ ಇಂದು ನಡೆಯುವ “ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಯು.ಎ.ಇ.ಯ ಭಾರತೀಯ ವಲಸಿಗರೊಂದಿಗೆ ಇರಲು ನಾನು ಸಮಯಾವಕಾಶವನ್ನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು!

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ನಮ್ಮ ವಲಸಿಗ ಸಮುದಾಯ ಮತ್ತು ಪ್ರಪಂಚದೊಂದಿಗೆ ಭಾರತದ ವ್ಯವಹಾರಗಳನ್ನು ಗಾಢವಾಗಿಸುವ ಅವರ ಪ್ರಯತ್ನಗಳ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಈ ಸಂಜೆ, “ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಯು.ಎ.ಇ.ಯ ಭಾರತೀಯ ವಲಸಿಗ ಸಮುದಾಯದ ಜೊತೆಗೆ ಇರಲು ನಾನು ಸಮಯಾವಕಾಶಗಳನ್ನು ಎದುರು ನೋಡುತ್ತಿದ್ದೇನೆ! ಈ ಸ್ಮರಣೀಯ ಸಂದರ್ಭದಲ್ಲಿ ಭಾಗವಹಿಸಿ, ಬನ್ನಿ ಜೊತೆ ಸೇರಿಕೊಳ್ಳಿ.”