ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್, ಇಂದು ‘ಟಿವಿಎಸ್ ಆರ್ಬಿಟರ್’ (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ 99,900 (ಎಕ್ಸ್-ಶೋರೂಮ್, ಬೆಂಗಳೂರು; PM ಇ-ಡ್ರೈವ್ ಸ್ಕೀಮ್ ಸೇರಿದಂತೆ). ಇದನ್ನೂ ಓದಿ : ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾನ್ವಿ.ಕೆ. ಅವರಿಗೆ ಚಿನ್ನದ ಪದಕ

ಆರ್ಬಿಟರ್ 3.1kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ 158km ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಆದರೆ ನಿಜವಾದ ರೇಂಜ್ ಸುಮಾರು 120 ಕಿಮೀ ನೀಡಬಹುದು. ಸ್ಕೂಟರ್‌ನ ಗರಿಷ್ಠ ವೇಗವನ್ನು ಗಂಟೆಗೆ 68 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.
ಟಿವಿಎಸ್ ಆರ್ಬಿಟರ್‌ಗೆ ಓಲಾ S1Z ಮತ್ತು ರಿವರ್ ಇಂಡೀ ಸ್ಕೂಟರ್‌ಗಳಲ್ಲಿ ನೀಡಿರುವಂತೆ 14-ಇಂಚಿನ ಮುಂಭಾಗದ ಚಕ್ರ ನೀಡಲಾಗಿದೆ. ಹಿಂಭಾಗದ ಚಕ್ರ 12 ಇಂಚಿದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಓವರ್-ದಿ-ಏರ್ ಅಪ್‌ಡೇಟ್‌ಗಳು, ಆಂಟಿ-ಥೆಫ್ಟ್, ಕ್ರ್ಯಾಶ್ ಮತ್ತು ಜಿಯೋ-ಫೆನ್ಸಿಂಗ್ ಒಳಗೊಂಡ ಸುರಕ್ಷತಾ ಎಚ್ಚರಿಕೆಗಳನ್ನು ಕನೆಕ್ಟೆಡ್ ಆಪ್ ಮೂಲಕ ಪಡೆಯಬಹುದಾಗಿದೆ. ಈಕೋ ಮತ್ತು ಪವರ್ ಮೋಡ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ (ರಿವರ್ಸ್ ಫಂಕ್ಷನ್) ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಹೊಂದಿದೆ.
