ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಸಿದ್ದಕಟ್ಟೆ ನೇತ್ರಾವತಿ ಸಭಾಂಗಣದಲ್ಲಿ ಮಂಥನ -2024 ಕಾರ್ಯಕ್ರಮದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸೇವಾ ತುಡರ್ ಪ್ರಶಸ್ತಿ-2024 ಪ್ರಶಸ್ತಿ ಪ್ರದಾನಿಸಿದರು.

ಈ ಸಂದರ್ಭದಲ್ಲಿ ಹ್ಯೂಮ್ಯಾನಿಟಿ ಸಂಸ್ಥಾಪಕ ರೋಷನ್ ಬೆಳ್ಮಣ್, ಸ್ವರ್ಣ ಸಂಜೀವಿನಿ ಸಂಸ್ಥಾಪಕ ಸಚಿನ್ ಸುವರ್ಣ, ರೋ. ಮೈಕಲ್ ಡಿಕೊಸ್ತ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ರೋ. ಶಿವಯ್ಯ, ಟ್ರಸ್ಟ್ ಸದಸ್ಯ ಸುರೇಶ್ ಸುವರ್ಣ, ಅಶ್ವಥ ಅರಳ, ಪ್ರಶಾಂತ್ ಅಳಕೆ, ರಂಜಿತ್ ಶೆಟ್ಟಿ, ಸಂತೋಷ್ ಬಂಗೇರ, ಪ್ರದೀಪ್, ನಿತಿನ್ ಉಪಸ್ಥಿತರಿದ್ದರು.

ಟ್ರಸ್ಟ್ ಸಂಸ್ಥಾಪಕ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.