ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ವಗ್ಗ ವಲಯದ ವಾಮದಪದವು ಚೆನ್ನೈ ತೋಡಿ ಕಾರ್ಯಕ್ಷೇತ್ರದಲ್ಲಿ ಯಂತ್ರ ಶ್ರೀ ಕಾರ್ಯಕ್ರಮ ಜರಗಿತು.

ಕೃಷಿಕ ದೊಂಬಯ್ಯ ಅವರಿಗೆ ಭತ್ತದ ತಟ್ಟೆನೇಜಿ ಹಸ್ತಾಂತರ

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷಿಕ ದೊಂಬಯ್ಯ ಅವರಿಗೆ ಭತ್ತದ ತಟ್ಟೆನೇಜಿಯನ್ನು ಹಸ್ತಾಂತರ ಮಾಡಿ ಕೃಷಿಕರು ಯಂತ್ರಶ್ರೀ ಯೋಜನೆಯ ಮೂಲಕ ಕಡಿಮೆ ಖರ್ಚಿನಲ್ಲಿ ಭತ್ತದ ಕೃಷಿ ನಾಟಿ ಮಾಡಿ ಅಧಿಕ ಲಾಭ ಪಡೆಯಿರಿ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಿತ ದರದಲ್ಲಿ ಬಾಡಿಗೆಯಲ್ಲಿ ಕೃಷಿ ಮಾಡಲು ಯಂತ್ರೋಪಕರಣಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಯಂತ್ರ ಶ್ರೀ ಯೋಜನೆಯ ಮೇಲ್ವಿಚಾರಕರಾದ ಉಮೇಶ್ ರವರು ಯಂತ್ರ ಶ್ರೀ ಮೂಲಕ ಬತ್ತದ ಕೃಷಿ ನಾಟಿ ಮಾಡುವ ವಿಧಾನಗಳ ಬಗ್ಗೆ ತರಬೇತಿ ಮಾಹಿತಿ ನೀಡಿದರು. ತಾಲೂಕು ಕೃಷಿ ಮೇಲ್ವಿಚಾರಕರಾದ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.