ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ,ಸಜಿಪ ಮಾಗಣೆ ವತಿಯಿಂದ ಕಟೀಲು ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ಬಂಟ್ವಾಳ : ಸಜೀಪ ಮೂಡ,ಸಜೀಪ ಮುನ್ನೂರು,ಸಜೀಪನಡು,ಸಜೀಪಪಡು ಗ್ರಾಮಗಳನ್ನು ಒಳಗೊಂಡಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ,ಸಜಿಪ ಮಾಗಣೆ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ವತಿಯಿಂದ ಸಜೀಪಮೂಡ ಗ್ರಾಮದ ಕೈಮುಗಿಯುವಗೋಳಿ ಎಂಬಲ್ಲಿ ದಿನಾಂಕ 23 -2-2025 ನೇ ರವಿವಾರ ಸಂಜೆ 6 ಗಂಟೆಯಿಂದ ಭಕ್ತಿ ಪೂರ್ವಕ 9ನೇ ವರ್ಷದ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜರಗಲಿರುವುದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.