ದಕ್ಷಿಣ ಕನ್ನಡ ಜಿಲ್ಲಾ ಜವಾಹರ್ ಬಾಲ್ ಮಂಚ್ ವತಿಯಿಂದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಪುಣ್ಯಾಸ್ಮರಣೆಯ ಪ್ರಯುಕ್ತ ತಿತಿಲಿ ಯೂನಿಟ್ ರಚನೆ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಜವಾಹರ್ ಬಾಲ್ ಮಂಚ್ ವತಿಯಿಂದ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಪುಣ್ಯಾಸ್ಮರಣೆಯ ಪ್ರಯುಕ್ತ ಜಿಲ್ಲಾಧ್ಯಕ್ಷ ನ್ಯಾಯವಾದಿ ಶೈಲಜಾ ರಾಜೇಶ್ ನೇತೃತ್ವದಲ್ಲಿ ಮಂಗಳವಾರ ಶ್ರೀಶೈಲ ಬಾಳ್ತಿಲ ದಲ್ಲಿ ತಿತಿಲಿ ಯೂನಿಟ್ ರಚಿಸಲಾಯಿತು ಇದನ್ನೂ ಓದಿ: .ಆಟದ ಜೊತೆಗೆ ಹುತಾತ್ಮ ಸೈನಿಕರನ್ನು ಸ್ಮರಿಸುವ ಕಾರ್ಯ ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸಹಕಾರಿಯಾಗಿದೆ -ಜನಾರ್ದನ ಪೂಜಾರಿ
ಈ ಸಂದರ್ಭದಲ್ಲಿ 18 ವರ್ಷದ ಕೆಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸದರಿ ವರ್ಷದಲ್ಲಿ 10ನೆ ತರಗತಿ ಮತ್ತು. ಪಿಯುಸಿಯಲ್ಲಿ ಆತೀ ಹೆಚ್ಚು ಅಂಕ ಪಡೆದ ಶ್ರೇಯ ಮತ್ತು ಶ್ರವಣ್ ಹಾಗೂ ಶೌರ್ಯ ಮಕ್ಕಳಾದ ಆರಾಧ್ಯ ದಯನೀತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳಾದ. ಶ್ರೇಷ್ಠ ,ಮೋಕ್ಷಿತಾ ಇಂಚರ, ಇಶಾನಿ, ಶ್ರವಣ್, ಶ್ರೇಯ ಮಾಡಿದರು.
ಜಿಲ್ಲಾಧ್ಯಕ್ಷ ನ್ಯಾಯವಾದಿ ಶೈಲಜಾ ರಾಜೇಶ್ ಅವರು ಮಾತನಾಡಿ ಮಕ್ಕಳು ದೇವರ ಸಮಾನ ಜವಾಹರ್ ನೆಹರುರಾವರಿಗೂ ಮಕ್ಕಳೆಂದರೆ ಪ್ರಾಣ ಹಾಗಾಗಿ ಮಕ್ಕಳ ಮೂಲಕ ಈ ಕಾರ್ಯಕ್ರಮ ದ ಉದ್ಘಾಟನೆಯನ್ನು ಮಾಡಿ ನೆಹರೂ ರವರ ಪುಣ್ಯಸ್ಮರಣೆಯನ್ನು ಮಾಡಿ ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಮಕ್ಕಳು ಹಿಂದೆ ನಡೆದು ಬಂದ ದಾರಿಯನ್ನು ಮರೆಯಬಾರದು ಮಕ್ಕಳು ಸಂಸ್ಕಾರವಂತ ಪ್ರಜೆಗಳಾಗಿ, ಅಪ್ಪ ಅಮ್ಮ ಗುರು ಹಿರಿಯರಿಗೆ ಗೌರವ ಕೊಟ್ಟು ಮನೆ ಮತ್ತು ದೇಶ ದ ಆಸ್ತಿಯಾಗಬೇಕು ಎಂದು ಸಂದೇಶವಿತ್ತರು. ಇದನ್ನೂ ಓದಿ : ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು
ಕಾರ್ಯಕ್ರಮದಲ್ಲಿ ಡಾ. ರಾಜೇಶ್ ಪೂಜಾರಿ, ಚಂದ್ರವತಿ, ಅನ್ನಪೂರ್ಣ, ಸುಲೋಚನಾ, ಶಾರದಾ, ಜಯಂತಿ, ವಿನಯ ಉಪಸ್ಥಿತರಿದ್ದರು. ಪುಣ್ಯ ಸ್ಮರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು.