– ಆಪರೇಷನ್‌ ಸಿಂಧೂರ – ಅನಗತ್ಯ ಹೇಳಿಕೆ ನೀಡದಂತೆ ಎನ್‌ಡಿಎ ನಾಯಕರಿಗೆ ಸಲಹೆ

ನವದೆಹಲಿ: ಭಾರತ – ಪಾಕಿಸ್ತಾನ ನಡುವಿನ ಕದನ ವಿರಾಮದಲ್ಲಿ (India Pakistan Ceasefire) ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂದು ಎನ್‌ಡಿಎ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ : ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ದೆಹಲಿಯಲ್ಲಿ ನಡೆದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಉನ್ನಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಆಪರೇಷನ್‌ ಸಿಂಧೂರ (Operation Sindoor) ವಿಷಯ ಪ್ರಸ್ತಾಪಿಸಿದರು. ಈ ವೇಳೆ ಕದನ ವಿರಾಮ ಕೋರಿ ಪಾಕಿಸ್ತಾನವೇ ಭಾರತಕ್ಕೆ ಮನವಿ ಮಾಡಿತು. ಈ ವಿಷಯದಲ್ಲಿ ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂದು ಸಭೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದು.. ಎನ್‌ಡಿಎನ ಎಲ್ಲ ನಾಯಕರು ತಮ್ಮ ಭಾಷಣಗಳಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಹಾಗೂ ಅನಗತ್ಯ ಹೇಳಿಕೆ ನೀಡುವುದನ್ನು ತಪ್ಪಿಸುವಂತೆ ಸಭೆಯಲ್ಲಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಟ್ರಂಪ್‌ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆ. ಇಡೀ ಸಮಸ್ಯೆಯನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ. ಕದನ ವಿರಾಮ ಸಾಧ್ಯವಾಗಿದ್ದು ನನ್ನಿಂದಲೇ ಅಂತ ಹಲವು ವೇದಿಕೆಗಳಲ್ಲಿ ಬೊಬ್ಬೆ ಹೊಡೆದುಕೊಂಡಿದ್ದರು.ಇದನ್ನೂ ಓದಿ :  ಅಮೆರಿಕದಲ್ಲಿ ಬಿರುಗಾಳಿ ಅಬ್ಬರಕ್ಕೆ 25 ಮಂದಿ ಬಲಿ

ಕಳೆದ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್‌ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಮೇ 7-8ರ ಮಧ್ಯರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತ. ಇದರಿಂದ ಕುತಂತ್ರ ಹೂಡಿದ್ದ ಪಾಕ್‌ ಭಾರತದ ಸೇನಾನೆಲೆಗಳು ಸೇರಿದಂತೆ ಹಲವು ನಗರಗಳ ಮೇಲೆ ಮಿಸೈಲ್‌ ದಾಳಿಗೆ ಯತ್ನಿಸಿತ್ತು. ಈ ವೇಳೆ ಪಾಕ್‌ನ ಎಲ್ಲ ದಾಳಿಯನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತ್ತು. ಇದಾದ ಬಳಿಕ ಪಾಕ್‌ನ ಹಲವು ವಾಯುನೆಲೆಗಳು ಮತ್ತು ರೆಡಾರ್‌ ಕೇಂದ್ರಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿ ಧ್ವಂಸಗೊಳಿಸಿತ್ತು.