ಕತಾರ್ನ ದೋಹಾದಲ್ಲಿ ತನ್ನ ಮೊದಲ ಕಾರ್ಯಕ್ರಮದಲ್ಲಿಂದು ಕತಾರ್ ಪ್ರಧಾನಿ ಮತ್ತು ವಿದೇಶಾಂಗ ಸಚಿವರಾದ ಗೌರವಾನ್ವಿತ ಶೇಖ್ ಮೊಹಮದ್ ಬಿನ್ ಅಬ್ದುಲ್ ರೆಹ್ಮಾನ್ ಅಲ್ ಥಾನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.

ಉಭಯ ನಾಯಕರು ವ್ಯಾಪಾರ, ಹೂಡಿಕೆ, ಇಂಧನ, ಹಣಕಾಸು ಮತ್ತು ತಂತ್ರಜ್ಞಾನ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ತಮ್ಮ ಅಭಿಪ್ರಾಯ ವಿನಿಯಮ ಮಾಡಿಕೊಂಡರು. ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ಚರ್ಚಿಸಿದರು ಮತ್ತು ಪ್ರಾದೇಶಿಕ ಹಾಗೂ ಅದರಾಚೆ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದರು.

ತರುವಾಯ ಕತಾರ್ ನ ಪ್ರಧಾನಮಂತ್ರಿಯವರು ತಮ್ಮ ಗೌರವಾರ್ಥ ಏರ್ಪಡಿಸಿದ್ದ ಔತಣ ಕೂಟದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದ್ದರು.