ಸದ್ಯದ ಪ್ರಾದೇಶಿಕ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು. ಇದನ್ನೂ ಓದಿ : ಇರಾನ್ ಪರಮಾಣು ಸೌಲಭ್ಯದ ಮೇಲೆ ದಾಳಿ – ವಿಕಿರಣ ಸೋರಿಕೆಯ ಆತಂಕ
ದೂರವಾಣಿ ಸಮಾಲೋಚನೆಯ ವೇಳೆ, ಪ್ರಧಾನಮಂತ್ರಿ ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳಗಳನ್ನು ತಿಳಿಸಿದರು ಮತ್ತು ನಾಗರಿಕರ ಸುರಕ್ಷತೆಯು ಆದ್ಯತೆಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ಯುದ್ಧವನ್ನು ಶೀಘ್ರವಾಗಿ ನಿಲ್ಲಿಸುವ ಅಗತ್ಯತೆಯ ಕುರಿತು ಭಾರತದ ನಿಲುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.
