ಚಂಡೀಗಢ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ಸತ್ನಾಮ್ ಸಿಂಗ್ ಸಂಧು ಅವರನ್ನು ಭಾರತದ ರಾಷ್ಟ್ರಪತಿಯವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;
“ರಾಷ್ಟ್ರಪತಿ ಜಿ ಅವರು ಶ್ರೀ ಸತ್ನಾಮ್ ಸಿಂಗ್ ಸಂಧು ಜಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಶ್ರೀ ಸತ್ನಾಮ್ ಜಿ ಅವರು ಒಬ್ಬ ಪ್ರಸಿದ್ಧ ಶಿಕ್ಷಣತಜ್ಞ ಮತ್ತು ಸಮಾಜ ಸೇವಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ತಳಮಟ್ಟದ ಜನರಿಗೆ ವಿಭಿನ್ನ ರೀತಿಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರೀಯ ಏಕೀಕರಣಕ್ಕಾಗಿ ಅವರು ಯಾವಾಗಲೂ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು ಅನಿವಾಸಿ ಭಾರತೀಯರೊಂದಿಗೆ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಸಂಸದೀಯ ಪ್ರಯಾಣಕ್ಕೆ ನಾನು ಶುಭ ಹಾರೈಸುತ್ತೇನೆ. ಅವರು ತಮ್ಮ ಅಭಿಪ್ರಾಯಗಳಿಂದ ರಾಜ್ಯಸಭೆಯ ಕಲಾಪಗಳನ್ನು ಪುಷ್ಟೀಕರಿಸುವ ವಿಶ್ವಾಸ ನನಗಿದೆ̤