ಬಂಟ್ವಾಳ : ಅಸ್ಪ್ರಶ್ಯತೆ ಎಂಬ ಕಳೆ ಬೇರನ್ನು ಕಿತ್ತು ಹಾಕಿ, ಎಲ್ಲರಿಗೂ ಭಗವಂತನ ಸೇವೆಯಲ್ಲಿ ನಿಸ್ಸಂಕೋಚವಾಗಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಗುರುಗಳನ್ನು ನಾವು ನಿತ್ಯವು ಸ್ಮರಿಸಬೇಕು ಎಂದು ಯುವವಾಹಿನಿ (ರಿ. )ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು
ಅವರು ಅ.1ರಂದು ಯುವವಾಹಿನಿ (ರಿ. )ಬಂಟ್ವಾಳ ಘಟಕದ ಆಶ್ರಯದಲ್ಲಿ ಕಲ್ಲಡ್ಕ ಯೋಗೀಶ್ ಪೂಜಾರಿ ಕಲ್ಲಡ್ಕ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ-5 ಕಾರ್ಯಕ್ರಮವು ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ. ಹಾಗೂ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಉದ್ಯೋಗ ಮತ್ತು ಭವಿಷ್ಯ ನಿರ್ದೆಶಕರಾದ ಕಿರಣ್ ಪೂಂಜರೆಕೋಡಿ, ಸದಸ್ಯರಾದ ಪ್ರಶಾಂತ್ ಏರಮಲೆ, ವಿಘ್ನೇಶ್ ಬೊಳ್ಳಾಯಿ, ಸೂರಜ್ ತುಂಬೆ, ಯತೀಶ್ ಬೊಳ್ಳಾಯಿ,ಸತೀಶ್ ಬಾಯಿಲ, ನಿಕೇಶ್ ಕೊಟ್ಯಾನ್,ಹರೀಶ್ ಅಜೆಕಲಾ, ನಾಗೇಶ್ ಏಲಬೆ,ಶ್ರವಣ್ ತುಂಬೆ, ಗಣೇಶ್, ಸುನೀಲ್ ನಾಯಿಲ, ಮೊದಲದವರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.