ಬೆಂಗಳೂರಿನ ಜ್ಞಾನಭಾರತಿ ಕಲಾ ಗ್ರಾಮದ ಆವರಣದಲ್ಲಿ ಸರ್ಕಾರದ ಸಕಲ ಗೌರವಗಳೊಂದಿಗೆ ನಡೆದ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅವರ ಪಾರ್ಥಿವ ಶರೀರಕ್ಕೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಅಂತಿಮ ಗೌರವ ನಮನ ಸಲ್ಲಿಸಿದರು.
ಸಾಲುಮರದ ತಿಮ್ಮಕ್ಕನವರು ಯಾರು ನಡೆಯದ ಹೊಸ ದಾರಿಯನ್ನು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು, ಕೃತಿಯಲ್ಲಿ ಮಾಡಿ ತೋರಿಸಿದವರು.
ಅತ್ಯಂತ ಬಡ ಕುಟುಂಬದಿಂದ ಬಂದ ಸಾಲುಮರದ ತಿಮ್ಮಕ್ಕ, ತನಗೆ ಮಕ್ಕಳಿಲ್ಲ ಎಂಬ ಕೊರಗನ್ನು ಬಿಟ್ಟು, ಗಿಡಗಳನ್ನು ನೆಡುವ ಮೂಲಕ ಅವೇ ತನ್ನ ಮಕ್ಕಳು ಎಂದು ಭಾವಿಸಿ ನೀರು ಹಾಕಿ ಬೆಳೆಸಿದರು.
ಪರಿಸರ ಸಂರಕ್ಷಣೆಗಾಗಿ ತಿಮ್ಮಕ್ಕನವರ ನಿಸ್ವಾರ್ಥ ಮತ್ತು ಶುದ್ಧ ಸೇವೆಯನ್ನು ನಾಡು ಸದಾ ಸ್ಮರಿಸಲಿದೆ. ಮುಂದಿನ ಪೀಳಿಗೆಗೆ ಹೊಸ ಆದರ್ಶವನ್ನು ಬಿಟ್ಟು ಹೋಗಿರುವ ಅವರಿಗೆ ನನ್ನ ಭಾವಪೂರ್ಣ ನಮನಗಳು.