ಚಾಮರಾಜನಗರ: ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು ಹಸಮಣೆಯಿಂದ ನೇರವಾಗಿ ಪರೀಕ್ಷೆಗೆ ಹಾಜರಾದ ಪ್ರಸಂಗ ಚಾಮರಾಜನಗರ  ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಯೋಗೇಶ್ ಜೊತೆ ಕೊಳ್ಳೇಗಾಲದ ಆರ್.ಸಂಗೀತ ವಿವಾಹ ಇಂದು ನಿಶ್ಚಯವಾಗಿತ್ತು. ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ನೆರವೇರಿತು. ಕೊಳ್ಳೇಗಾಲದ ವಾಸವಿ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಸಂಗೀತ ವ್ಯಾಸಂಗ ಮಾಡುತ್ತಿದ್ದರು.

ಇಂದು ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ನವವಧು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಎಕ್ಸಾಂ ಬರೆದಿದ್ದಾರೆ. ಮದುವೆ ಸಂಭ್ರಮದ ನಡುವೆಯೂ ಯುವತಿ ಶಿಕ್ಷಣದ ಮಹತ್ವ ಸಾರುವ ಕೆಲಸ ಮಾಡಿದ್ದಾರೆ.