ಗಾಂಧಿನಗರ: ಗುಜರಾತ್‍ನ ಸೂರತ್ (Surat) ನಗರದ ಕಲಾವಿದರೊಬ್ಬರು 9,999 ವಜ್ರಗಳನ್ನು ಬಳಸಿ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಕಲಾಕೃತಿಯನ್ನು ರಚಿಸಿದ್ದಾರೆ. ಈ ವೀಡಿಯೋ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

ಕಲಾವಿದ ಚಿಕ್ಕ ಚಿಕ್ಕ ವಜ್ರಗಳನ್ನು ಬಳಸಿ ಕಪ್ಪು ಬೋರ್ಡ್ ಮೇಲೆ ರಾಮಮಂದಿರದ ಕಲಾಕೃತಿ ರಚಿಸಿದ್ದಾರೆ. ಈ ಬೋರ್ಡ್ ಮೇಲ್ಭಾಗದಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ ಚಿತ್ರವಿದೆ.