ಚಂಡೀಗಢ: ಯಾವುದೇ ಒಬ್ಬ ವಿದ್ಯಾರ್ಥಿ ತನ್ನ ಗುರಿ ತಲುಪಬೇಕಾದ್ರೆ ಹಿಂದೆ ಶಿಕ್ಷಕರೊಬ್ಬರು ಇರಲೇಬೇಕು. ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುತ್ತಾ, ಜೀವನಕ್ಕೆ ದಾರಿ ದೀಪವಾಗಬೇಕಿರುವುದು ಶಿಕ್ಷಕರು . ಆದ್ರೆ ಇಲ್ಲೊಬ್ಬಳು ಶಿಕ್ಷಕಿ ಅದಕ್ಕೆ ವ್ಯತಿರಿಕ್ತವಾಗಿದ್ದಾಳೆ. ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕೆ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿ ಕ್ರೌರ್ಯ ಮೆರೆದಿದ್ದಾಳೆ. ಇದನ್ನೂ ಓದಿ : ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ
ಹೌದು. ಹರಿಯಾಣದ (Haryana) ಪಾಣಿಪತ್‌ನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಅಂತ ಶಿಕ್ಷಕಿಯೊಬ್ಬಳು ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿಸಿ ನೇತುಹಾಕಿದ್ದಾಳೆ, ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿದ್ದಾಳೆ. ಇದನ್ನೂ ಓದಿ : ಎಸ್ ವಿ ಎಸ್ ಪಿಯು ಕಾಲೇಜಿನ ಎನ್ನೆಸ್ಸೆಸ್ ಶಿಬಿರ ಸಮಾರೋಪ
ಆಗಸ್ಟ್ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿಯ ಮಂಡಳಿಗೆ ಈ ವಿಷಯ ತಿಳಿದಿದ್ದೂ ಮುಚ್ಚಿಟ್ಟಿದ್ದರು. ಆದ್ರೆ ಹಲ್ಲೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಮೇಲೆ ವಿಷಯ ಗೊತ್ತಾಗಿದೆ.
ಇನ್ನೂ ಅದೇ ಶಾಲೆಯಲ್ಲಿ ಇತರ ಮಕ್ಕಳನ್ನು ಥಳಿಸುತ್ತಿರುವ ಇನ್ನೊಂದು ವಿಡಿಯೋ ಸಹ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ಶಿಕ್ಷಕಿ ಮಗುವನ್ನ ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸತತ ಒಂಬತ್ತು ಬಾರಿ ಮಗುವಿಗೆ ಕಪಾಳಮೋಕ್ಷ ಮಾಡುತ್ತಿದ್ದಾಳೆ. ವಿಡಿಯೋಗಳನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಚಾಲಕನ ಕೈಯಿಂದಲೂ ಥಳಿಸಿದ್ದಳು ಎನ್ನಲಾಗಿ ಕಾಲೇಜು ಪ್ರಾಂಶುಪಾಲರು ಹಾಗೂ ಬಸ್ ಚಾಲಕನನ್ನ ಬಂಧಿಸಲಾಗಿದೆ.
