ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ( ರಿ) ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇವರ ಜಂಟಿ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಸುಜೀರ್, ಮತ್ತು ಸುಜೀರ್ ಮೌಲಾನ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಡಿಸೆಂಬರ್ 15 ಜರಗಿತು. ಇದನ್ನೂ ಓದಿ :ಮಜಿ ವೀರಕಂಭ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ” ಹೆಜ್ಜೆ ಗೆಜ್ಜೆ- ನಿನಾದ ವೈವಿಧ್ಯ”
ನಿವೃತ್ತ ಅರೋಗ್ಯ ಮೇಲ್ವಿಚಾರಕರಾದ ಶ್ರೀಯುತ ಜಯರಾಮ ಪೂಜಾರಿ ಮಕ್ಕಳಿಗೆ ದುಶ್ಚಟಗಳಾದ ಅತಿಯಾದ ಮೊಬೈಲ್ ಬಳಕೆ, ಧೂಮಪಾನ ,ಮದ್ಯಪಾನ, ಡ್ರಗ್ಸ್, ಗಾಂಜಾ, ಸೇವನೆಯಿಂದಾಗುವ ದುಷ್ಪರಿಣಾಮ, ಹಿರಿಯರಿಗೆ, ತಂದೆ ತಾಯಿ ಶಾಲಾ ಗುರುಗಳಿಗೆ ಕೊಡುವ ಗೌರವ ,ಶಿಸ್ತು ,ಆಚಾರ – ವಿಚಾರ, ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಲೋಕ ನಾಯ್ಕ್, ಕನ್ನಡ ಉಪನ್ಯಾಸಕಿ ಶ್ರೀಮತಿ ರೇಖಾ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ, ಶ್ರೀಮತಿ ನೌಜಿಯ, ಉಪಸ್ಥಿತರಿದ್ದರು.
ಸುಜೀರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಮಲ್ಲಿಕಾ ಅವರು ಸ್ವಾಗತಿಸಿ, ತುಂಬೆ ವಲಯದ ಮೇಲ್ವಿಚಾರಕಿ ಶ್ರೀಮತಿ ಮಮತ ಪ್ರಾಸ್ತವಿಕ ಮಾತಿನ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು.
