ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.)ಬಂಟ್ವಾಳ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪೂಜಾಲಕಟ್ಟೆ ವಲಯ, ಇದರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶ್ರೀ ಪಂಚ ದುರ್ಗ ಪ್ರೌಢಶಾಲೆ ಕಕ್ಕೆ ಪದವುನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಹಾಸ ರೈ ವಹಿಸಿದ್ದರು.
ಕೇಂದ್ರ ಒಕ್ಕೂಟದ ಅಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರು ಆದ ಚಿದಾನಂದ ಕಕ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಯಾದ ಆರ್ಥಿಕ ಆರೋಗ್ಯ ಸಾಕ್ಷರತೆಯ ಸಮಾಲೋಚಕಿ ಶ್ರೀಮತಿ ಉಷಾ ನಾಯಕ್ ರವರು ವಿದ್ಯಾರ್ಥಿಗಳಿಗೆ ದುಶ್ಚಟದಿಂದ ಆಗುವ ದುಷ್ಪರಿಣಾಮ ದ ಬಗ್ಗೆ ತಿಳಿಹೇಳಿ ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು ಹದಿಹರೆಯದ ವಯಸ್ಸಿನಲ್ಲಿ ದಾರಿ ತಪ್ಪುವುದು ಸಹಜ ಅದಕ್ಕಾಗಿ ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದು ತಾವು ಬದಲಾವಣೆ ಆಗುವುದರ ಜೊತೆಗೆ ನಮ್ಮ ಮನೆಯಲ್ಲಿ ತಂದೆ ತಾಯಿ ಅಥವಾ ಸಂಬಂಧಿಕರು ಕೆಟ್ಟ ಚಟಕ್ಕೆ ದಾಸರಾಗಿದ್ದರೆ ಅವರನ್ನು ಸರಿದಾರಿಗೆ ತರುವುದು ಮಕ್ಕಳಿಗೂ ಸಾಧ್ಯವಿದೆ. ಮಕ್ಕಳು ದೃಢ ನಿರ್ಧಾರ ಮಾಡಬೇಕು. ಯೋಜನೆಯ ಈ ಸ್ವಾಸ್ತ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು ಅದನ್ನು ಜೀವನದಲ್ಲಿ ಅಳಡಿಸಬೇಕೆಂದು ತಿಳಿಸಿ ಸ್ವಾಸ್ತ್ಯ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು.
ಪುಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಸವಿತಾ, ಸೇವಾಪ್ರತಿನಿಧಿ ಶೇಖರ್ ಸುಧಾ ಉಪಸ್ಥಿತರಿದ್ದರು.