ಬಂಟ್ವಾಳ: ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಇದನ್ನೂ ಓದಿ :  ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಕಲ್ಲಡ್ಕದ ಪಿಲಿ – 2025 ಊದುಪೂಜೆ ಹಾಗೂ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ ಕಾರ್ಯಕ್ರಮ

ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕಿನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಶ್ರೀಮತಿ ಪೂರ್ಣೇಶ್ವರಿ.ಭಟ್, ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಹರಿಪ್ರಸಾದ್, ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಚೈತ್ರಾ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕ ದೀಕ್ಷಿತ್ ಮತ್ತು ಘಟಕ ನಾಯಕಿ ಪ್ರತೀಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿ ಮಾಯಿಲ.ಕೆ ಹಾಗೂ ಉಪನ್ಯಾಸಕರು ಸಹಕರಿಸಿದರು.

ಶಿಬಿರಾರ್ಥಿಗಳಾದ ಆದಿತ್ಯ ಮತ್ತು ಪೂಜಿತಾ ಅನಿಸಿಕೆ ಅಭಿವ್ಯಕ್ತಪಡಿಸಿದರು. ಶಿಬಿರಾರ್ಥಿಗಳು ಎನ್ನೆಸ್ಸೆಸ್ ಆಶಯ ಗೀತೆ ಹಾಡಿದರು. ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುದರ್ಶನ್.ಬಿ ಪ್ರಸ್ತಾವನೆಗೈದರು. ಶ್ರೀ ಶಶಿಧರ್.ಎಸ್ ಸ್ವಾಗತಿಸಿದರು. ಶಿಬಿರಾಧಿಕಾರಿ ಶ್ರೀಮತಿ. ಗೀತಾ.ಯು ವಂದಿಸಿದರು. ಸೌಂದರ್ಯಲಕ್ಷ್ಮೀ ನಿರೂಪಿಸಿದರು.