ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀ ನಾರಾಯಣಸಾ ಕೆ. ಭಾಂಡಗೆ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಎನ್.ಡಿ.ಎ. ಅಭ್ಯರ್ಥಿ ಶ್ರೀ ಕುಪೇಂದ್ರ ರೆಡ್ಡಿ ವಿಧಾನಸಭೆಯ ಕಾರ್ಯದರ್ಶಿಯವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ , ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಡಿ.ಕುಮಾರ ಸ್ವಾಮಿ, ವಿರೋಧ ಪಕ್ಷ ನಾಯಕರಾದ ಆರ್. ಅಶೋಕ್ , ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಸುನೀಲ್ ಕುಮಾರ್ ಕಾರ್ಕಳ , ವಿಧಾನಸಭೆ ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಹೆಚ್ ಪಾಟೀಲ್, ಶಾಸಕರುಗಳಾದ ಶ್ರೀ ಸತೀಶ್ ರೆಡ್ಡಿ, ಶ್ರೀ ಬಿ.ಪಿ ಹರೀಶ್, ಶ್ರೀ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಹನುಮಂತ ನಿರಾಣಿ, ಶ್ರೀ ಪಿ.ಹೆಚ್.ಪೂಜಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪುರ್ ಅವರು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಉಭಯ ಸದನಗಳ ಸದಸ್ಯರು ಉಪಸ್ಥಿತರಿದ್ದರು.