ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಳ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿ ಕೊಳ್ಳಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಬಂಟ್ವಾಳ ಸದಸ್ಯರಿಗೆ ಅಧ್ಯಯನ ಪ್ರವಾಸ

ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮಿಯಾಪಾದೆ ಸೌಮ್ಯ ಅವರ ಮಲ್ಲಿಗೆ ನಾಟಿ, ಬೊಳ್ಳುರು ಸತೀಶ್ ಅವರ ಹೈನುಗಾರಿಕೆ ಹಾಗೂ ಓಲೆ ಬೆಲ್ಲ ತಯಾರಿ, ವಾಸು ನಾಯ್ಕರವರ ತಿಂಡಿ ಘಟಕ, ಅಲ್ಲಿಪಾದೆ ರಘು ಪೂಜಾರಿ ಯವರ ಜನನಿ ಪ್ರೊಡಕ್ಟ್, ನಾವುರ ಜಾಲಜಾಕ್ಷಿ ಯವರ ಬ್ಯಾಗ್ ತಯಾರಿ, ನಾವೂರ ಹೇಮಲತಾ ಅವರ ರೊಟ್ಟಿ ತಯಾರಿ ಘಟಕ, ಭೇಟಿ ಮಾಡಿ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಯಿತು.

ಸೌಮ್ಯ ಅವರ ಮಲ್ಲಿಗೆ ಕೃಷಿಯ ಮಾಹಿತಿ ಪಡೆದರು

ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಭೇಟಿ ಮಾಡಿ ಠಾಣಾಧಿಕಾರಿ ರಾಜೇಶ್ ಮತ್ತು ರೋಹಿತ್ ರವರು ಅಗ್ನಿ ಶಾಮಕದ ಬಗ್ಗೆ ಪ್ರಾತ್ಯೇಕ್ಷಯ ಮೂಲಕ ಮಾಹಿತಿ ನೀಡಿದರು.

ಬೊಳ್ಳುರು ಸತೀಶ್ ಅವರ ಓಲೆ ಬೆಲ್ಲ ತಯಾರಿ ಬಗ್ಗೆ ಮಾಜಿತಿ ಪಡೆದರು

ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳದ ಕೌನ್ಸಿಲರ್ ವಿದ್ಯಾ ಅವರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ಮಾಹಿತಿ ನೀಡಿದರು.

ಹೈನುಗಾರಿಕೆಯ ಮಾಹಿತಿ ತಿಳಿದುಕೊಂಟರು

ನಗರ ಪೊಲೀಸ್ ಸ್ಟೇಷನ್ ಬಿ.ಸಿ. ರೋಡ್ ಇಲ್ಲಿ ಭೇಟಿ ಮಾಡಿ ಮಹಿಳಾ ಕಾನೂನಿನ ಬಗ್ಗೆ ಹಾಗೂ ಪೊಲೀಸ್ ಸ್ಟೇಷನ್‌ ನಲ್ಲಿ ಮಹಿಳೆಯರು ತಮಗೆ ಆಗುವ ಸಮಸ್ಯೆ ಗಳ ಬಗ್ಗೆ ದೂರು ಕೊಡುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯುವ ಸಮಸ್ಯೆ ಬಗ್ಗೆ ಮಾಹಿತಿಯನ್ನು ಪೊಲೀಸ್ ಅಧಿಕಾರಿ ಧನ್ಯರವರು ಮಾಹಿತಿ ನೀಡಿದರು.

ಮಹಿಳಾ ಕಾನೂನಿನ ಬಗ್ಗೆ ಮಾಹಿತಿ ಪಡೆದುಕೊಂಡರು

ಈ ಸಂಧರ್ಭ ವಿಜಯ ಹಾಗೂ ವಸಂತಿಯವರು ಸಹಕಾರ ನೀಡಿದರು.

ಜನಜಗೃತಿ ಸದಸ್ಯರು ಹಾಗೂ ಕೇಂದ್ರ ಒಕ್ಕೂಟ ಮಾಜಿ ಅಧ್ಯಕ್ಷರು ಸದಾನಂದ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.