ಕಂಟಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಲರವ -2025

ಬಂಟ್ವಾಳ : ಬಂಟ್ವಾಳ ತಾಲೂಕು ಬಾಲ್ತಿಲ ಗ್ರಾಮದ ಕಂಟಿಕ ಶಾಲಾ ವ್ಯಾಪ್ತಿಯ ನಾಗರಿಕರಿಗೆ ಶನಿವಾರ ಹಬ್ಬದ ವಾತಾವರಣ. ಬರೋಬರಿ 40 ವರ್ಷಗಳ ಬಳಿಕ ತಮ್ಮ ಊರಿನ ಶಾಲೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮೆರಗು ಎರಡು ವರ್ಷದ ಹಿಂದೆ ಮುಚ್ಚುವ ಅಂತದ ಪರಿಸ್ಥಿತಿ ಬಂದಾಗ ವರ್ಗಾವಣೆಗೊಂಡು ಶಾಲೆಗೆ ಬಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಿಕ್ಷಕಿ ಚೇತನ ಕುಮಾರಿ ರವರ ವಿಶೇಷ ಪ್ರಯತ್ನದಿಂದಾಗಿ 5 ಮಕ್ಕಳಿದ್ದ ಶಾಲೆಯಲ್ಲಿ ಇವತ್ತು 22 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಅನ್ಯ ರಾಜ್ಯದ ವಲಸೆ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಆಗಬಾರದು ಎಂದು ರಾಜಸ್ಥಾನ, ಬಿಹಾರ ದಿಂದ ಒಟ್ಟು 6 ಮಕ್ಕಳನ್ನು ತನ್ನ ಶಾಲೆಗೆ ದಾಖಲೆ ಮಾಡಿಕೊಂಡು ಅವರಿಗೆ ಕನ್ನಡ ಓದಲು ಬರೆಯಲು ಕಲಿಸಿ ಇವತ್ತು ಯಕ್ಷಗಾನವನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮಟ್ಟದಲ್ಲಿ ತಯಾರಿಗೊಳಿಸಿದ್ದು ವಿಶೇಷವೇ ಸರಿ.

ಕಲ್ಲಡ್ಕ ಲಕ್ಷ್ಮೀ ನಿವಾಸ್ ಹೋಟೆಲ್ ಮಾಲಕಿ ಶ್ರೀ ಪದ್ಮಾವತಿ ದ್ವೀಪ ಪ್ರಜ್ವಲನೆ ಮಾಡಿದರು. ಅವರೊಂದಿಗೆ ಶಾಲಾ ಸ್ಥಳದಾನಿಗಳಾದ ಅನಂತ ಶೆಣೈ ಕಂಟಿಕ, ಬಾಲ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ, ಸತ್ಯ ಸಾಯಿ ಸಂಸ್ಥೆಯ ನಾರಾಯಣ ಕಾರಂತ್ ಮುಕಾಂಬಿಕ ದಂಪತಿಗಳು, ಶ್ರೀ ಶಾರದಾ ಗಣಪತಿ ಶಿಕ್ಷಣ ಸಂಸ್ಥೆಯ ಸಂಚಾಲಕ ರಾಜರಾಮ್ ಭಟ್, ವಿವೇಕ ಜಾಗೃತಾ ಬಳಗದ ಅಧ್ಯಕ್ಷ ಜಯಲಕ್ಷ್ಮಿ ಗಿರಿಧರ್, ಬಂಟ್ವಾಳ ಬಿ ಆರ್ ಸಿ ಯ ಐ ಆರ್ ಟಿ ಗಳಾದ ರವೀಂದ್ರ ಹಾಗೂ ಸುರೇಖಾ, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್, ಹಿಂದೆ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಸುಜಾತ, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ಶ್ವೇತ, ಅಂಗನವಾಡಿ ಶಿಕ್ಷಕಿ ತನುಜ, ಮೊದಲಾದವರು ಈ ಸಂದರ್ಭದಲ್ಲಿ ಜೊತೆ ಸೇರಿದರು.

ನಂತರ ಮಕ್ಕಳಿಂದ ನೃತ್ಯ ಭಜನೆ, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಲೆತ್ತೂರು ನರಸಿಂಹ ಮಯ್ಯ ರವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ ಯಕ್ಷಗಾನ ವೈಭವ “ಶ್ರೀ ಕೃಷ್ಣ ಲೀಲೆ, ಕಂಸ ವದೆ ” ಜರಗಿತು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಕ್ಕಳಿಗೆ ಯಕ್ಷಗಾನ ಕಲಿಸಿದ ಅಲೆತ್ತೂರು ನರಸಿಂಹ ಮಯ್ಯರವರನ್ನು ಗೌರವಿಸಲಾಯಿತು. ಶಾಲೆಗೆ ವಿಶೇಷ ಸಹಕಾರ ನೀಡಿದವರಿಗೆ ಶಾಲಾ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಣ ಇಲಾಖೆಯ ಸಹಕಾರ, ದಾಣಿಗಳ ಕೊಡುಗೆ, ಊರಿನವರ ಪ್ರೊತ್ಸಾಹದಿಂದ ಮೂಲಭೂತ ಅವಶ್ಯಕತೆ ಪೂರೈಸಿಕೊಂಡು 7 ನೇ ತರಗತಿ ತನಕ ಶಾಲೆ ಯನ್ನು ಮಾಡಬೇಕು ಎಂದು ಇದ್ದೇವೆ ಎನ್ನುತಾರೆ ಪ್ರಭಾರ ಮುಖ್ಯ ಶಿಕ್ಷಕಿ ಚೇತನ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಚೇತನ ಸ್ವಾಗತಿಸಿ, ಶಿಕ್ಷಕ ಮಧುಸೂದನ್ ವಾಸ್ತವಿಕ ಮಾಡಿ, ಗೌರವ ಶಿಕ್ಷಕಿಯರಾದ ಮೋನಿಷಾ ಸಹಕರಿಸಿದರು. ಅತಿಥಿ ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.