ಬಂಟ್ವಾಳ:  ಯುವವಾಹಿನಿ ಬಂಟ್ವಾಳ ಘಟಕವು ಸಾಹಿತ್ಯ ಬರವಣಿಗೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕವಿ, ಸಾಹಿತಿ, ಸಂಘಟಕ ಬಿ.ತಮ್ಮಯ್ಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸಾಹಿತ್ಯ ಸ್ಪರ್ಧೆಯು ಸಾಹಿತ್ಯದ ಎರಡು ಪ್ರಕಾರಗಳನ್ನು ಕೇಂದ್ರೀಕರಿಸಿ ನಡೆಸಿದ್ದು ಅದರ ಫಲಿತಾಂಶ ಪ್ರಕಟಗೊಂಡಿದೆ. ‘ಅತೀ ಸಣ್ಣಕಥೆ’ ಸ್ಪರ್ಧೆಯಲ್ಲಿ ಸುಲ್ತಾನ್ ಮಾನ್ಸೂರು ಮಂಚಿ ಅವರ ಸಣ್ಣಕಥೆ “ಜಾಥಾ” ಪ್ರಥಮ ಸ್ಥಾನವನ್ನೂ , ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಸಣ್ಣಕಥೆ “ಸ್ಫೋಟ” ದ್ವಿತೀಯ ಬಹುಮಾನವನ್ನು ಪಡೆದಿರುತ್ತದೆ. ಇದನ್ನೂ ಓದಿ : ಶೌರ್ಯ ಘಟಕ ಕಾಡಬೆಟ್ಟು ವಗ್ಗ ತಂಡಕ್ಕೆ ದೇವಸ್ಥಾನ ಒಳಾಂಗಣ ಸ್ವಚ್ಛತಾ ಮಷೀನ್ ಹಸ್ತಾಂತರ

ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಅವರ “ಬೂಬು ಎಂಬ ಮರಿ-ಮೊಮ್ಮಗಳು” ಪ್ರಥಮ ಬಹುಮಾನವನ್ನೂ, *ನಳಿನಿ ಭೀಮಪ್ಪ ದಾರವಾಡ ಅವರ “ಮುಡಿಯಿಂದ ಜಾರುತಿಹವೋ…!” ಲಲಿತ ಪ್ರಬಂಧ ದ್ವಿತೀಯ ಬಹುಮಾನವನ್ನು ಪಡೆದಿರುತ್ತದೆ

. ಈ ಸ್ಪರ್ಧೆಗಳಲ್ಲಿ ನಾಡಿನ ಹಿರಿಕಿರಿಯ ಸಾಹಿತಿಗಳಿಂದ ನೂರಕ್ಕೂ ಹೆಚ್ಚಿನ ಪ್ರವೇಶಗಳು ಬಂದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಯ ವಿಜೇತರಿಗೆ ಯುವವಾಹಿನಿ ಆಯೋಜಿಸುವ ಕಾರ್ಯಕ್ರಮದಲ್ಲಿ ನಗದು ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಗುವುದು.