ಅಮ್ಟೂರು ಗ್ರಾಮದ ಶ್ರೀಕೃಷ್ಣ ಮಂದಿರದಲ್ಲಿ ೨೪ನೇ ವರ್ಷದ ವಾರ್ಷಿಕೋತ್ಸವ ಬಹಳ ಸಂಭ್ರಮದಲ್ಲಿ ನೆರವೇರಿತು. ಬೆಳಿಗ್ಗೆ ಗಣಹೋಮ ಸಹಿತ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊAಡ ಈ ವೈದಿಕ ಕರ‍್ಯಗಳನ್ನು ಅನಂತರಾಮ ಐತಾಳ್ ಓಣಿಬೈಲು ನಡೆಸಿಕೊಟ್ಟರು.


ನಂತರ ನಡೆದ ಸಭಾಕರ‍್ಯಕ್ರಮದಲ್ಲಿ ಕುಳಾಯಿ ಚಿತ್ರಾಪುರ ಮಠದ ಏಕಮಾತ್ರ ಅನುವಂಶಿಕ ಮುಕ್ತೇಸರರು ಶ್ರೀ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ ದ ಪರಮಪೂಜ್ಯ ಶ್ರೀ ವಿದ್ಯೇಂದ್ರತೀರ್ಥ ಶ್ರೀ ಪಾದರು ಆರ್ಶೀವಚನ ನೀಡಿ ಮಾತನಾಡಿ ಎಲ್ಲಾ ಭಜನಾ ಮಂದಿರಗಳಲ್ಲಿ ಭಜನೆ ನಡೆದರೆ, ಇಲ್ಲಿ ಭಜನಾ ಕಾರ್ಯದೊಂದಿಗೆ ನಡೆಯುವ ಇನ್ನಿತರ ಸಾಮಾಜಿಕ. ಧಾರ್ಮಿಕ ಕರ‍್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇಂತಹ ಕರ‍್ಯಗಳು ಇನ್ನಷ್ಟು ನಡೆಯಲಿ ಎಂದರು.

ಕೇರಳ ರಾಜ್ಯದ ಭಾಜಪದ ಕರ‍್ಯದರ್ಶಿಯಾಗಿರುವ ಶ್ರೀಕಾಂತ್ ಇವರು ಧಾರ್ಮಿಕ ಭಾಷಣ ಮಾಡುತ್ತಾ ಇಂತಹ ಭಜನಾ ಮಂದಿರಗಳಿAದ ಹಿಂದು ಸಂಘಟನೆ ಸಾಧ್ಯ, ಭಜನೆಯೊಂದಿಗೆ ಸಮಾಜದ ಕರ‍್ಯ ಅದರಂತೆ ದೇಶದ ಕರ‍್ಯ ಮಾಡಬೇಕು ಎಂದು ಹೇಳಿದರು.

ಅಯೋಧ್ಯೆ ಮಂದಿರದ ಇತಿಹಾಸ ಹಾಗೂ ಅದರ ಹೋರಾಟವನ್ನು ವಿವರಿಸಿದರು. ನಮ್ಮಕಾಲದಲ್ಲಿಯೇ ರಾಮ ಮಂದಿರ ಆಗುವುದು ನಮ್ಮೆಲ್ಲರ ಸೌಭಾಗ್ಯ. ನಾವೆಲ್ಲರೂ ಒಟ್ಟಾಗಿ ಒಂದಾಗಿ ದೇಶವನ್ನುಇನ್ನಷ್ಟು ಬಲಿಷ್ಟಗೊಳಿಸೋಣ ಎಂದು ಹೇಳಿದರು.

ಇನ್ನೋರ್ವ ಮುಖ್ಯಅತಿಥಿ ದಕ್ಷಿಣ ಕನ್ನಡ ಜಿಲ್ಲಾಉಪಾಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್ ಮಾತನಾಡಿ ಈ ಮಂದಿರ ಬೆಳೆದ ರೀತಿ, ಇಲ್ಲಿ ನಡೆಯುವ ಕರ‍್ಯ ಚಟುವಟಿಕೆಗಳನ್ನು ಉಲ್ಲೇಖಿಸಿ ಇದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮಾರ್ನಬೈಲು ಧರ್ಮಚಾವಡಿ ಧರ್ಮದರ್ಶಿ ಉದಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮಂದಿರದ ಗೌರವಾಧ್ಯಕ್ಷ ಶಂಕರನಾರಾಯಣ ಐತಾಳ್ ಓಣಿಬೈಲು, ಅಧ್ಯಕ್ಷರು ರಮೇಶ್‌ ಕರಿಂಗಾಣ, ಮಹಿಳಾ ಮಂಡಲದ ಅಧ್ಯಕ್ಷೆ ಇAದಿರಾ ಬಾಳಿಕೆ ಉಪಸ್ಥಿತರಿದ್ದರು.

ಕರ‍್ಯಕ್ರಮದಲ್ಲಿ ಈ ಊರಿನ ಕ್ರೀಡಾ ಪ್ರತಿಭೆಗಳು ರಾಷ್ಟçಮಟ್ಟದಲ್ಲಿ ಸ್ಪರ್ಧಿಸಿರುವ ಸೃಜನ್, ಲಿಖಿತ್‌ ಎಸ್, ಮತ್ತು ಪ್ರಥಮ್‌ ಅವರನ್ನು ಸನ್ಮಾನಿಸಲಾಯಿತು.

ಕರ‍್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ದಾನಿಗಳನ್ನು ವಿಶೇಷ ಪ್ರಸಾದ ನೀಡಿ ಗೌರವಿಸಲಾಯಿತು. ಮಂದಿರದ ಕರ‍್ಯದರ್ಶಿ ಕುಶಾಲಪ್ಪಅಮ್ಟೂರು ಮಂದಿರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಕರ‍್ಯಕ್ರಮದ ಗಣ್ಯರನ್ನು ಸ್ವಾಗತಿಸಿದರು.

ಪ್ರೀತಿಕಾ ಪ್ರಾರ್ಥಿಸಿ, ಜಿತೇಶ್ ಶೆಟ್ಟಿ ಬಾಳಿಕೆ ವಂದಿಸಿ, ರಾಜೇಶ್‌ ಕೊಟ್ಟಾರಿ ಕರ‍್ಯಕ್ರಮ ನಿರ್ವಹಿಸಿದರು.

ಸಂಜೆ ಗAಟೆ 7ರಿಂದ ಬಾಚಕೆರೆ ಶ್ರೀ ದುರ್ಗಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ, ಇವರಿಂದ ಗುಳಿಗ-ಶಿವಗುಳಿಗ ಎಂಬ ಯಕ್ಷಗಾನ ಬಯಲಾಟ ನೆರವೇರಿತು.