ಬಂಟ್ವಾಳ ಶ್ರೀ ವೆಂಕಟರಮಣಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಯೋಗದಿನಾಚರಣೆಯನ್ನು ಆಚರಿಸಲಾಯಿತು.
ಯೋಗ ದಿನದ  ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಗ ತರಬೇತುದಾರರಾದ ಶ್ರೀ ಚನ್ನಕೇಶವಡಿ.ಆರ್‌ ಅವರು ಮಾತನಾಡಿ ಗಾಳಿಪಟದಂತೆ ಹರಿದಾಡುವ ಮನಸ್ಸಿಗೆ ಯೋಗವೆಂಬ ಸೂತ್ರದಿಂದ ಹತೋಟಿಗೆತರಲು ಸಾಧ್ಯವಾಗುತ್ತದೆ. ಯೋಗಸಾಧನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ಯೋಗವನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುತ್ತದೆ ಎಂದು ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್‌ಡಿ.ಎಮ್. ಅವರು ಸಾಧನೆಗೆ ಏಕಾಗ್ರತೆ ಸಹಕಾರಿ ಅದನ್ನು ಯೋಗದಿಂದ ಪಡೆಯಲು ಸಾಧ್ಯ. ಯೋಗಾಭ್ಯಾಸದಿಂದ ವೈಯಕ್ತಿಕ ಹಾಗೂ ಸಾಮಾಜಿಕ ಜೀವನ ಬಲಗೊಳಿಸಲು ಸಾಧ್ಯವಿದೆ. ಯೋಗವೆಂಬ ಅಮೂಲ್ಯವಾದ ವಿದ್ಯೆಯು ನಮ್ಮ ಸನಾತನ ಭಾರತೀಯರ ಕೊಡುಗೆಯಾಗಿದೆ ಎಂದರು.
ವೇದಿಕೆಯಲ್ಲಿಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಸಿ.ಸಿ. ಅಧಿಕಾರಿ ಲೆ.ಪ್ರದೀಪ್ ಪೂಜಾರಿ ಹಾಗೂ ಸಮೂಹ ಶಿಕ್ಷಣ ಸಂಸ್ಥೆಯ ಕ್ರೀಡಾ ಮೇಲ್ವಿಚಾರಕರಾದ ಮಹೇಶ್ ಶೆಟ್ಟಿ, ಉಪಸ್ಥಿತರಿದ್ದರು.
ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಸುದರ್ಶನ್‌ಬಿ ಸ್ವಾಗತಿಸಿ, ಬಿ.ಆರ್.ಎಮ್.ಪಿ.ಸಿ. ಶಾಲೆಯ ಪ್ರಾಂಶುಪಾಲರಾದ ಜೂಲಿ ಟಿ.ಜೆ.ವಂದಿಸಿದರು. ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರಿಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಕು.ನಿಖಿತಾಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಅತಿಥಿಗಳಿಂದ ನೆರದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಯೋಗದಿನದ ಶಿಷ್ಟಾಚಾರದ ಅನುಸಾರವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಸಮೂಹ ಸಂಸ್ಥೆಗಳ ಉಪನ್ಯಾಸಕರು, ಅಧ್ಯಾಪಕೇತರ ನೌಕರರು ಭಾಗವಹಿಸಿದ್ದರು.