ಬಂಟ್ವಾಳ: ಶಿಕ್ಷಣ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಉತ್ಕೃಷ್ಟ ಸಾಧನ. ಆ ಕಾರಣದಿಂದ ಯಾವುದೇ ವ್ಯಕ್ತಿ ಶಿಕ್ಷಣದಿಂದ ವಂಚಿತವಾಗಬಾರದು. ಸಮಾಜವು ಬಲಿಷ್ಠ ಹಾಗೂ ಪ್ರಗತಿಪರವಾಗಬೇಕಾದಲ್ಲಿ ವಿದ್ಯೆಯು ಪ್ರಮುಖವಾದುದು ಎಂದು ಶ್ರೀ ವೆಂಕಟರಮಣಸ್ವಾಮೀ ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ನುಡಿದರು. ಇದನ್ನೂ ಓದಿ : ಅಶಕ್ತ ಕುಟುಂಬಕ್ಕೆ ಯುವವಾಹಿನಿ ಸಂಸ್ಥೆಯಿಂದ ಮನೆ ಹಸ್ತಾಂತರ
ಅವರು ಕಾಲೇಜಿನ ಐ.ಕ್ಯು.ಎ.ಸಿ., ಎನ್.ಎಸ್.ಎಸ್. ಹಾಗೂ   ಇನ್ಸಿ÷್ಟಟ್ಯೂಶನ್ ಇನ್ನೋವೇಶನ್ ಕೌನ್ಸಿಲ್‌ಗಳ ಸಂಯುಕ್ತಾಶ್ರಯದಲ್ಲಿ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್‌ರವರ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಶಿಕ್ಷಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀಕ್ಷಿತ ಗಟ್ಟಿ ಟಿ. ನಿರೂಪಿಸಿ, ಅಮಿತ್ ಎಸ್. ಭಟ್ ವಂದಿಸಿದರು.