ಬಂಟ್ವಾಳ: ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಾಕಾರಿಯಾಗಿದ್ದು, ಯೋಜನೆಯಲ್ಲಿ ಕೇವಲ ಮಣ್ಣು ಹೊರುವ ಕೆಲಸ ಮಾತ್ರವಲ್ಲ, ಅದು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆಉತ್ತೇಜನ ನೀಡುತ್ತದೆ ಎಂದು ಶ್ರೀ ವೆಂಕಟರಮಣ ಸಾಮೀ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ ಹೇಳಿದರು. ಇದನ್ನೂ ಓದಿ : ಎನ್.ಎಸ್.ಎಸ್. ಕಾರ್ಯಕ್ರಮಗಳ ಹಾಗೂ ‘ಸ್ವಚ್ಛತಾ ಹಿ ಸೇವಾ’ ಅಭಿಯಾನ ಉದ್ಘಾಟನೆ
ಅವರು ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್ ನಲ್ಲಿನಡೆಯುತ್ತಿರುವ ಬಂಟ್ವಾಳ ಶ್ರೀ ವೆಂಕಟರಮಣ ಸಾಮೀ ಪದವಿ ಪೂರ್ವಕಾಲೇಜಿನರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದರು.
ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರು, ಶ್ರೀಮತಿ ಪೂರ್ಣೆಶ್ವರಿ ಭಟ್ ಮಾತನಾಡಿ ಭಾವನಾತ್ಮಕ ಸಂಬಂಧದ ಜೊತೆಯಲ್ಲಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದಕ್ಕೆ ಎನ್.ಎಸ್.ಎಸ್ಉತ್ತಮ ವೇದಿಕೆ ಎಂದರು.
ಶ್ರೀ ವೆಂಕಟರಮಣ ಸಾಮೀ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್.ಬಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಪದವಿ ಪೂರ್ವಕಾಲೇಜಿನಉಪಪ್ರಾಂಶುಪಾಲರಾದ ಪ್ರದೀಪ್ ಪೂಜಾರಿ, ಶ್ರೀ ವೆಂಕಟರಮಣ ಸಾಮೀ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಇಲ್ಲಿನ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀಮತಿ ವೀಣಾದೇವಾಡಿಗ, ಎನ್.ಎಸ್.ಎಸ್ಘಟಕ ನಾಯಕರಾದ ದೀಕ್ಷಿತ್ ಮತ್ತು ಪ್ರತೀಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಗೀತಾ.ಯು ಸ್ವಾಗತಿಸಿ, ಸಹಶಿಬಿರಾಧಿಕಾರಿ ಮಾಯಿಲ.ಕೆ ವಂದಿಸಿ, ಸಹಶಿಬಿರಾಧಿಕಾರಿ ಭವಿತಾ.ಕೆ ನಿರೂಪಿಸಿದರು.
