ಬಂಟ್ವಾಳ:   ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ,  ಇಲ್ಲಿ ವಿದ್ಯಾರ್ಥಿ ಸಂಘ, ವಿಜ್ಞಾನ ಸಂಘ, ಲಲಿತ ಕಲಾ ಸಂಘಗಳ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು.
ಮುಖ್ಯ ಅತಿಥಿಗಳಾದ ಸಂಸ್ಕೃತ ಶಿಕ್ಷಕರು ಮತ್ತು ಯಕ್ಷಗಾನ ತರಬೇತುದಾರರು ಶ್ರೀಯುತ ಶ್ರೀವತ್ಸ ಎಸ್ ಆರ್, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಬಳಿಕ ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಶಿಕ್ಷಣದ ಜೊತೆಗೆ ಸಹಪಠ್ಯೇತರ ಚಟುವಟಿಕೆಗಳು ಅವಶ್ಯಕ . ಆಸಕ್ತಿಯಿಂದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುತ ವ್ಯಕ್ತಿತ್ವ ಆಕಾರದಿಂದ ಅಲ್ಲ ಅವನ ಪ್ರತಿಭೆಯಿಂದ ಎಂದು ನುಡಿದರು.  ಇದನ್ನೂ ಓದಿ : ರಸ್ತೆ ಸುರಕ್ಷತಾ ಹಾಗೂ ಮಾದಕ ದ್ರವ್ಯ ವಿರೋಧಿ, ಪೋಕ್ಸೋ ಕಾಯಿದೆ ಕಾನೂನು ಬಗ್ಗೆ ಜಾಗೃತಿ ಕಾರ್ಯಗಾರ

ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಹರಿಪ್ರಸಾದ್ ಎಲ್ಲಾ ಆಯ್ಕೆಯಾದ ಪಧಾಧಿಕಾರಿಗಳಿಗೆ ಶುಭ ಹಾರೈಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ರೀದೇವಿ ಪಿ. ಮತ್ತು ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿಯಾದ ಶ್ರೀಮತಿ ವೀಣಾ ದೇವಾಡಿಗ ಹಾಗೂ ಶಾಲಾ ನಾಯಕ ತನೀಷ್ ಆರ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು.  ವಿದ್ಯಾರ್ಥಿಗಳಾದ ಕುಮಾರಿ ಆಶ್ನ ಪಿಂಟೋ ಸ್ವಾಗತಿಸಿದರು,  ಅಂಕಿತಾ ಪೈ ವಂದಿಸಿ ,  ಕುಮಾರಿ ಝೀಬಾ ಮರಿಯಮ್ ಕಾರ್ಯಕ್ರಮವನ್ನು ನಿರೂಪಿಸಿದರು.