ಬಂಟ್ವಾಳ: ದೇಶದ ಬಗ್ಗೆ ಬಹುದೊಡ್ಡ ನಿರೀಕ್ಷೆ ಮತ್ತು ಕಲ್ಪನೆಗಳೊಂದಿಗೆ ಹೋರಾಡಿ ದೇಶಕೋಸ್ಕರ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ಜ್ಞಾಪಿಸಬೇಕು ಭಾರತದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ವೀರಪುರುಷರನ್ನು ನೆನೆದು, ಸಿಕ್ಕ ಸ್ವಾತಂತ್ರವನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ವಿದ್ಯಾಗಿರಿ ಬಂಟ್ವಾಳ ಇದರ ಸದಸ್ಯೆ ಅಲ್ಕಾ ಕೂಡಿಗೆ ಶೆಣೈ ಎಂದು ಹೇಳಿದರು.

ಅವರು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು. ಇದನ್ನೂ ಓದಿ :  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

ಸ್ವಾತಂತ್ರ್ಯೋತ್ಸವ ಕೇವಲ ದಿನಾಚರಣೆಗೆ ಸೀಮಿತವಾಗಿರದೇ ಪಡೆದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬ ಭಾರತೀಯರು ಶ್ರಮ ವಹಿಸಬೇಕು. ಭಾರತೀಯರಾದ ನಾವು ದೇಶದ ಪ್ರಗತಿಯತ್ತ ಚಿಂತಿಸುವುದು ಅಗತ್ಯ ಎಂದು ಹೇಳಿದರು. ಇದನ್ನೂ ಓದಿ :  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಮುಖ್ಯೋಪಾಧ್ಯಾಯ ಹರಿಪ್ರಸಾದ್ ಮಾತನಾಡಿ ಪಠ್ಯ ವಿಷಯದಿಂದ ಪಡೆದ ಜ್ಞಾನದಿಂದ ಜೀವನ ರೂಪುಗೊಳ್ಳುವುದಿಲ್ಲ. ಭವಿಷ್ಯದಲ್ಲಿ ಸಾಧನೆಗೈಯಲು ಗುರುಹಿರಿಯರ ಮಾರ್ಗದರ್ಶನ ಜತೆ ಸಮಯ ನಿರ್ವಹಣೆಯ ಅರಿವು ಅಗತ್ಯ. ಆಧುನಿಕ ವ್ಯವಸ್ಥೆಯಲ್ಲಿ ವೃತ್ತಿ ಆಧಾರಿತ ಶಿಕ್ಷಣಕ್ಕೆ ಪÀÇರಕ ವಾತವರಣ ಒದಗಿಸಿಕೊಡಬೇಕು. ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಬದುಕುವ ಹಕ್ಕು ಇದೆ ಎಂದು ಶುಭ ಹಾರೈಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಎನ್.ಸಿ.ಸಿ ಆರ್ಮಿವಿಂಗ್, ಎನ್.ಸಿ.ಸಿ ನೇವಲ್ ವಿಂಗ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಬಿಂಬಿಸುವ ‘ಈಸೂರು ದಂಗೆ’ ಕಿರುಪ್ರಹಸನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕರ‍್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಚೈತ್ರ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ದೇವಾಡಿಗ, ಎನ್.ಸಿ.ಸಿ ಆರ್ಮಿವಿಂಗ್ ಅಧಿಕಾರಿ ರವಿ, ಎನ್.ಸಿ.ಸಿ ನೇವಲ್ ವಿಂಗ್ ಅಧಿಕಾರಿ ರತ್ನಾಕರ ಗೌಡ, ಶಿಕ್ಷಕ -ಶಿಕ್ಷಕೇತರರು ವರ್ಗದವರು ಉಪಸ್ಥಿತರಿದ್ದರು. ಇದನ್ನೂ ಓದಿ : ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ಬಂಟ್ವಾಳ: ನಶಾ ಮುಕ್ತ ಭಾರತಅಭಿಯಾನ

ವಿದ್ಯಾರ್ಥಿ ಸಾನ್ ಸಜಿತ್ ಸ್ವಾಗತಿಸಿ, ಮೇಧಾಶ್ರೀ ಮತ್ತು ಝೀಭಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತ್ಯುಷ್ ಜೆ.ಎಂ ವಂದನೆಗೈದರು.