ಬಂಟ್ವಾಳ ಗಣರಾಜ್ಯ ದಿನಾಚರಣೆಯ ಪ್ರಯುಕ್ತ ಜ.26 ರಂದು ನವದೆಹಲಿಯಲ್ಲಿ ನಡೆಯುವ “ರಿಪಬ್ಲಿಕ್ ಡೇ ಪೇರೆಡ್-2024” ಇದಕ್ಕೆ 18 ಕರ್ನಾಟಕ ಬ್ಯಾಟಲಿಯನ್ ಎನ್.ಸಿ.ಸಿ. ಮಂಗಳೂರು ಗ್ರೂಪ್‌ನಿಂದ 3/18ಕರ್ನಾಟಕ ಬ್ಯಾಟಲಿಯನ್ ಎನ್.ಸಿ.ಸಿ. ಆರ್ಮಿವಿಂಗ್ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಹಾಗೂ ಎನ್.ಸಿ.ಸಿ ಕೆಡಿಟ್ ಸಾರ್ಜೆಂಟ್ ಜಿತೇಶ್ ಕೆ. ಇವರು ಭಾಗವಹಿಸಲಿದ್ದಾರೆ.

1966-67ರಲ್ಲಿ ಸ್ಥಾಪನೆಗೊಂಡ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ (ರಿ) ಇದರ ಆಡಳಿತಕ್ಕೊಳಪಟ್ಟ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಆಗಿದ್ದು ಕಾಲೇಜು ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಆಯ್ಕೆಯಾಗಿ ಭಾಗವಹಿಸುತ್ತಿರುವುದು.

ಇವರಿಗೆ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಬಂಟ್ವಾಳ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಬಂಟ್ವಾಳ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.