ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಗೆ ಕಾರಣರಾದ ರಾಷ್ಟçಕವಿ ಕುವೆಂಪುರವರ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು.
ಕುವೆಂಪು ಯುಗದ ಕವಿ, ಜಗದ ಕವಿ, ಮಾನವತಾವಾದಿ ಎಂದು ಹೆಸರು ಪಡೆದಿದ್ದಾರೆ. ಅವರು ಹೇಳಿದ ಪಂಚಮAತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ನಮ್ಮ ಮುಂದಿನ ದೃಷ್ಟಿಯಾಗಬೇಕು.
ವರ್ಣಾಶ್ರಮ ಹಾಗೂ ಮತಪದ್ಧತಿ ಹೋಗಲಾಡಿಸಲು ತಮ್ಮ ಬರಹಗಳ ಮೂಲಕ ಕರೆಯಿತ್ತವರು. ಇವರ ವೈಚಾರಿಕತೆ ಸಾಮಾಜಿಕ ಕಾಳಜಿಗಳ ಫಲವಾಗಿ ಮೂಡಿಬಂದಿದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ನುಡಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ, ಕನ್ನಡ ವಿಭಾಗ ರಾಷ್ಟçಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳ್ಳಿ ಹಾಗೂ ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳ ಇವರ ಸಹಯೋಗದಲ್ಲಿ ನಡೆದ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ಎಂಬ ವಿಶೇಷ ಉಪನ್ಯಾಸ ಮಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಇವರು ಕುವೆಂಪು ಸಾಹಿತ್ಯದಲ್ಲಿ ದಿವ್ಯ ಅನುಭೂತಿ ಮತ್ತು ಮಾನವೀಯ ಮೌಲ್ಯಗಳು ಮಹತ್ವವನ್ನು ಪಡೆದಿದೆ.
ಅವರು ಸಮೃದ್ಧ ಸಾಹಿತ್ಯ ಕೃಷಿಯೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷ ಆಡಳಿತಗಾರರೂ ಆಗಿದ್ದರು ಎಂದು ನುಡಿದರು.
ಉಪನ್ಯಾಸದ ಕುರಿತಂತೆ ಕಾರ್ಯಕ್ರಮದ ಸಂಯೋಜಕರೂ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯ ಪ್ರಾಧ್ಯಾಪಕರೂ ಆದ ಡಾ.ರಾಜಶೇಖರ ಹಳೆಮನೆ ಪ್ರಸ್ತಾವಿಕ ಮಾತುಗಳನ್ನು ಆಡಿದರು.
ಸ್ಥಳೀಯ ಸಂಯೋಜಕರಾದ ಎಸ್.ವಿ.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಶಿವಣ್ಣಪ್ರಭು ಕೆ ಸ್ವಾಗತಿಸಿ, ಉಪನ್ಯಾಸಕ ಕಿಟ್ಟು ರಾಮಕುಂಜ ವಂದಿಸಿದರು.
ವಿದ್ಯಾರ್ಥಿನಿಯರಾದ ಹೇಮಲತಾ, ಶ್ರದ್ಧಾ, ಶ್ವೇತ ಕುವೆಂಪು ರಚಿತ ಕವನವನ್ನು ಹಾಡಿದರು. ವಿದ್ಯಾರ್ಥಿನಿ ನವ್ಯ ಕಾರ್ಯಕ್ರಮ ನಿರೂಪಿಸಿದರು.