ಬಿ.ಎಸ್ಸಿ ಐಡಿ ವಿಭಾಗದಲ್ಲಿ ಕು| ಪ್ರಜ್ಞಾ 93.17% ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಮೂವರು ವಿದ್ಯಾರ್ಥಿಗಳು 2022-23 ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಿ.ಎಸ್ಸಿ ವಿಭಾಗದಲ್ಲಿ ಕು| ಫಾತೀಮ ಪರೀಹಾ 97.38% ಅಂಕಗಳನ್ನು ಗಳಿಸಿ 4ನೇ ರ‍್ಯಾಂಕ್

ಬಿ.ಕಾಂ ವಿಭಾಗದಲ್ಲಿ ಕು| ಮೆಲೀಟಾ ಪ್ರೀಮಲ್ ಲೋಬೊ 95.45% ಅಂಕಗಳೊಂದಿಗೆ 5ನೇ ರ‍್ಯಾಂಕ್ ಪಡೆದುಕೊಂಡರು

ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯ ಕೀರ್ತಿಯನ್ನು ಈ ವಿಶಿಷ್ಟ ಸಾಧನೆಯೊಂದಿಗೆ ಹೆಚ್ಚಿಸಿದ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಶ್ರೀ ಅನಿರುದ್ಧ್ ಕಾಮತ್, ಶ್ರೀ ವೆಂಕತರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಕೆ ರೇಖಾ ಶೆಣೈ, ಪ್ರಾಂಶುಪಾಲರು, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.