ಬಂಟ್ವಾಳ: ಶ್ರೀ ದುರ್ಗಾ ಫ್ರೆಂಡ್ಸ್ ದುರ್ಗಾ ನಗರ ಕೂರಿಯಾಳ ಇದರ 18ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಶನಿವಾರ ದುರ್ಗಾ ನಗರ ದಲ್ಲಿ ನಡೆಯಿತು. ಇದನ್ನೂ ಓದಿ : WCD Chitradurga Recruitment 2025
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶೇಖರ ಸಾಮಾನಿ ಮಾಯಿಲ್ ಕೋಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಆಟೋಟ ಸ್ಪರ್ಧೆ ಹಾಗೂ ಮೊಸರು ಕುಡಿಕೆ ಗೆ ಮಾತ್ರ ಸೀಮಿತವಾಗದೆ ಮನೆಯಲ್ಲೂ ಕೂಡ ಹಿರಿಯರು ಆಚರಣೆ ಮಾಡಿದ ರೀತಿಯಲ್ಲೂ ಮನೆಯಲ್ಲೂ ಆಚರಣೆ ಮಾಡುವ ಮೂಲಕ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇ ಧ ಗ್ರಾ ಯೋಜನೆ ಕೂರಿಯಾಳ ಒಕ್ಕೂಟದ ಅಧ್ಯಕ್ಷರಾದ ಧನಲಕ್ಷ್ಮೀ. ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅರ್ಚಕರಾದ ಹೊನ್ನಪ್ಪ ಪೂಜಾರಿ,ಅಧ್ಯಕ್ಷರಾದ ಶ್ರೀ ನಿಧಿ ವಿ ಬಂಗೇರ, ಓಂಕಾರ ಸೇವಾ ಬಳಗ ದ ಅಧ್ಯಕ್ಷರಾದ ಸಂತೋಷ್ ಸುವರ್ಣ, ಓಂಕಾರೇಶ್ವರಿ ದೇವಿ ಭಜನಾ ಮಂದಿರ ದ ಮಹಿಳಾ ಸಮಿತಿಯ ಅಧ್ಯಕ್ಷರಾದ ಭಾರತಿ ರವೀಂದ್ರ ಹಾಗೂ ದುರ್ಗಾ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.
