ಬಂಟ್ವಾಳ ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ದೀರ್ಘಾಯುಷ್ಯ ಮತ್ತು ಅರೋಗ್ಯ ವೃದ್ಧಿಗಾಗಿ ರುದ್ರಾಭಿಷೇಕ ಪೂಜೆಯನ್ನು ದೇವಳದ ಪ್ರಧಾನ ಅರ್ಚಕರಾದ ಶ್ರೀ ರಾಮಚಂದ್ರ ಭಟ್ ದೈಲಾ ಅವರ ಮೂಲಕ ಸಲ್ಲಿಸಲಾಯಿತು.
ರಾಯಿ, ಕೊಯಿಳ ಬಿಜೆಪಿ ಕಾರ್ಯಕರ್ತರ ಮತ್ತು ನರೆಂದ್ರ ಮೋದಿ ಅಭಿಮಾನಿಗಳ ಪರವಾಗಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸಂಗಬೆಟ್ಟುಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರಾಯಿ ಬೆಟ್ಟು, ಜಿಲ್ಲಾ ಬಿಜೆಪಿ ಕಾರ್ಮಿಕ ಪ್ರಕೊಸ್ಟ ದ ಸಹ ಸಂಚಾಲಕ ಹರೀಶ್ ಆಚಾರ್ಯ ರಾಯಿ, ರಾಯಿ ಗ್ರಾಮ ಪಂಚಾಯತ್ ಸದಸ್ಯಗಳಾದ, ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಬಿಜೆಪಿ ಮಂಡಲದ ಕಾರ್ಯಕಾರಿಣಿ ಸದಸ್ಯರು ರವೀಂದ್ರ ಪೂಜಾರಿ ಬದಿನಡಿ, ರಾಯಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಗೌಡ ಗೊಲಿತಬೆಟ್ಟು, ಸಿವಿಲ್ ಗುತ್ತಿಗೆದಾರ ರಾಜೇಶ್ ಸಪಲ್ಯ ಗೋವಿಂದ ಬೆಟ್ಟು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.