ಬಂಟ್ವಾಳ ಪುರಸಭೆ ವತಿಯಿಂದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಡಿ ಸ್ವ ನಿಧಿಯಿಂದ ಸಮೃದ್ಧಿ ಮೇಳ ಹಾಗೂ ಮೈ ಭಿ ಡಿಜಿಟಲ್ ಕ್ಯಾಂಪ್ ಹಾಗೂ ಬೀದಿ ವ್ಯಾಪಾರಿಗಳಿಗೆ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು,

ಸದ್ರಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆಯ ಮಿಶನ್ ಮ್ಯಾನೇಜರ್ ಐರಿನ್ ರೆಬೆಲ್ಲೊ ಅವರು ಬೀದಿ ವ್ಯಾಪಾರಿಗಳ ಪಿ.ಎಂ. ಸ್ವ ನಿಧಿ ಯೋಜನೆಯಡಿ ಸಿಗುವ ಸಾಲ ಸೌಲಭ್ಯಗಳು ಹಾಗೂ ಬೀದಿ ವ್ಯಾಪಾರಿಗಳಿಗೆ ಸ್ವ ನಿಧಿ ಸಮೃದ್ಧಿ ಕಾರ್ಯಕ್ರಮದಡಿ ಸರಕಾದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ಅವರು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಆಯುಶ್ಮಾನ್ ಭಾರತ ಅಸಿಸ್ಟೆಂಟ್ ರಿಜನಲ್ ಕನ್ಸಲ್ಟೆಂಟ್ ಡಾ| ನೌಶಾದ್ ಅವರು ಆಯುಷ್ಮಾನ್ ಭಾರತ ಯೋಜನೆಯ ಕುರಿತು ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ವೀರಣ್ಣ ಅವರು ಪಿ ಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ಕೆನರಾ ಬ್ಯಾಂಕ್ ನ ಶರತ್, ಬಂಟ್ವಾಳ ಯೂನಿಯನ್ ಬ್ಯಾಂಕ್ ನ ಮ್ಯಾನೇಜರ್ ಎಡ್ವಿನ್ ಸತೀಶ್, ಬಿ.ಸಿ.ರೋಡ್‌ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಯಶವಂತ್, ಯೂನಿಯನ್ ಪಾಣೆಮಂಗಳೂರಿನ ಮ್ಯಾನೇಜರ್ ವಿನೋದ್,
ಎಸ್. ಬಿ. ಐ. ಲೋನ್ ಆಫೀಸರ್ ಲಾವಣ್ಯ, ಎಸ್.ಸಿ. ಡಿ. ಸಿ..ಸಿ. ಬ್ಯಾಂಕಿನ ಮ್ಯಾನೇಜರ್ ಗಣೇಶ್ ಕಾರಂತ್, ಬಂಟ್ವಾಳ ಬ್ಯಾಂಕ್ ಆಪ್ ಬರೋಡಾದ ಮ್ಯಾನೇಜರ್ ಆಶ್ವಿನಿ, ಇಂಡಿಯನ್ ಓವರ್ ಸೀಸ್ ಮ್ಯಾನೇಜರ್ ಗೌರವ್ ಪಾಲ್ ಹಾಗೂ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.

.ಈ ಸಂದರ್ಭದಲ್ಲಿ ಬ್ಯಾಂಕುಗಳಿಂದ ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ಹಾಗೂ ಕ್ಯೂ ಆರ್ ಕೋಡ್ ವಿತರಿಸಲಾಯಿತು. ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಹಾಗೂ ಎಜೆ ಅಸ್ಪತ್ರೆಯ ಸಮುದಾಯ ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿಗಳಿಂದ ಭಾಗವಹಿಸಿದ ಎಲ್ಲಾ ಬೀದಿ ವ್ಯಾಪಾರಿಗಳು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಸಲಾಯಿತು.

ಅರ್ಹ ಫಲಾನುಭವಿಗಳಿಗೆ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಕಾರ್ಡ್ ಮಾಡಿಸಿ ಕೊಡಲಾಯಿತು. ಕಾರ್ಯಕ್ರಮದಲ್ಲಿ ಜಯಶ್ರೀ, ವಿಮಲ ಹಾಗೂ ಮಂಗಳರವರು ಪ್ರಾರ್ಥನೆ ಮಾಡಿದರು.

ಸಮುದಾಯ ಸಂಪನ್ಮೂಲದ ಮಂಗಳ ಸ್ವಾಗತಿಸಿ, ಗೀತಾ ವಂದಿಸಿದರು. ಪುರಸಭೆಯ ಸಮುದಾಯ ಸಂಘಟಕಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.