ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಮತ್ತು ಬಂಟ್ವಾಳ ರಘರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ವಿದ್ಯಾಗಿರಿ ಬಂಟ್ವಾಳ ಇದರ ಸಂಯುಕ್ತಾಶ್ರಯದಲ್ಲಿ ಕಬ್ ಬುಲ್ ಬುಲ್ಸ್, ಸ್ಕೌಟ್ ಗೈಡ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಇದನ್ನೂ ಓದಿ: ನವರಾತ್ರಿ ಪೂಜೆಯ ಆತುರದಲ್ಲಿ ಭೀಕರ ದುರಂತ, ಗ್ಯಾಸ್ ಸ್ಫೋಟಕ್ಕೆ ಮನೆಯೇ ಛಿದ್ರ!
ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಗೈಡ್ ಆಯುಕ್ತ ಬಿ.ಮಹಮ್ಮದ್ ತುಂಬೆ ಅವರು ಈ ವಿಶೇಷ ಶಿಬಿರವನ್ನು ಉದ್ಘಾಟಿಸಿದರು.
ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್.ಬಿ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಮ್.ಡಿ.ಮಂಚಿಯವರು ಶಿಬಿರಕ್ಕೆ ಶುಭ ಹಾರೈಸಿದರು, ಮತ್ತು ಎರಡೂ ಸಂಸ್ಥೆಯ ಪ್ರಾಂಶುಪಾಲರು, ಕಬ್ ಮಾಸ್ಟರ್‌ಗಳು ಪ್ಲಾಕ್ ಲೀಡರ್‌ಗಳು, ಸ್ಕೌಟ್ ಮಾಸ್ಟರ್‌ಗಳು ಮತ್ತು ಗೈಡ್ ಕ್ಯಾಪ್ಟನ್‌ಗಳು ಉಪಸ್ಥಿತರಿದ್ದರು.
ಮೂರು ದಿನಗಳ ಈ ಶಿಬಿರದಲ್ಲಿ ಶಿಬಿರಾರ್ತಿಗಳಿಗೆ ಸಮಯ ಪ್ರಜ್ಞೆ,ಶಿಸ್ತು,ಸಹಜೀವನ ,ಪರಸ್ಪರ ಸಹಕಾರ, ನಾಯಕತ್ವ, ಪ್ರಥಮ ಚಿಕಿತ್ಸೆ,ದಿಕ್ಸೂಚಿ,ಬೆಂಕಿ ಇಲ್ಲದೆ ಅಡುಗೆ ತಯಾರಿ, ಬಿ.ಪಿಸಿಕ್ಸ್,ಯೋಗ,ಸಮವಸ್ತç,ಧ್ವಜಸ್ತಂಭ ತಯಾರಿ,ಮ್ಯಾಪಿಂಗ್‌ನ ಮಹತ್ವವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಭೋಧಿಸಲಾಗುತ್ತದೆ.
ಹೊರಸಂಚಾರ,ಆಶ್ರಮ ಭೇಟಿ ಮತ್ತು ಸೈಬರ್ ಕ್ರೆöÊಮ್ ಕಾರ್ಯಕ್ರಮಗಳು ನಡೆಯಲಿದು ್ದಒಟ್ಟು ೨೨೨ ಶಿಬಿರಾರ್ಥಿಗಳು ಶಿಬಿರದ ಉಪಯೋಗ ಪಡೆಯಲಿರುವರು. ವಿದ್ಯಾರ್ಥಿಗಳಾದ ಕುಮಾರಿ ದಿಯಾ.ಡಿ ಸ್ವಾಗತಿಸಿ,ಕುಮಾರಿ ಅಂಕಿತಾ ಆರ್ ನಾಯಕ್ ವಂದಿಸಿದರು.ಕುಮಾರಿ ಆಶ್ನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
