ಶ್ರೀಕೃಷ್ಣ ಮಂದಿರ ಅಮ್ಟೂರು 38ನೇ ವರ್ಷದ ಮೊಸರು ಕುಡಿಕೆ ಉತ್ಸವ ಶ್ರೀಕೃಷ್ಣ ಮಂದಿರದ ವಠಾರದಲ್ಲಿ ನಡೆಯಿತು. ಮಂದಿರದ ಅರ್ಚಕರಾದ ಮೋಹನ ಆಚರ‍್ಯ ಅವರು ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಕರ‍್ಯಕ್ರಮದ ಉದ್ಘಾಟಿಸಿ, ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಮಧ್ಯಾಹ್ನ 3.೦೦ ಗಂಟೆಗೆ ಭವ್ಯ ಶೋಭಾಯಾತ್ರೆಯು ಶ್ರೀಕೃಷ್ಣ ಮಂದಿರದಿಂದ ಹೊರಟು ಅಮ್ಟೂರು ಪೊಯ್ಯ ಕಂಡ ನಂತರ ನೆತ್ತಿಕ್ಲಲ್ಲುತನಕ ಸಾಗಿ ಅಲ್ಲಿಂದತಿರುಗಿ ಸಭಾಕರ‍್ಯಕ್ರಮ ನಡೆಯುವ ಅಮ್ಟೂರು ಮೈದಾನದಲ್ಲಿ ಮುಕ್ತಾಯಗೊಂಡಿತು.
ಸಂಜೆ ನಡೆದ ಸಭಾಕರ‍್ಯಕ್ರಮದಲ್ಲಿ ಹಿರಿಯ ಪತ್ರರ್ತರು ಹಾಗೂ ವೆಂಕಟ್ರಮಣ ಸ್ವಾಮಿ ದೇವಳ ಪ.ಪೂ ಕಾಲೇಜು ಬಂಟ್ವಾಳದ ಉಪಾನ್ಯಾಸಕರಾದ ಜಯಾನಂದ ಪೆರಾಜೆ ಮಾತನಾಡಿ ನಾವೆಲ್ಲರೂ ಹುಲಿಗಳಂತೆ ವೀರರು, ಶೂರರು ಆಗಬೇಕು, ಸಂಘಟಕರಾಗಿ ಸಮಾಜದ ಬೆಳವಣಿಗೆಗೆ, ದೇಶದರಕ್ಷಣೆಗೆ ಹೆಚ್ಚೆಚ್ಚು ಕೆಲಸ ಮಾಡಬೇಕು. ಅನ್ಯ ಮತೀಯ, ಅನ್ಯ ಸಂಸ್ಕೃತಿಗಳಿಂದ ನಮ್ಮ ಸಮಾಜದ ಮೇಲಾಗುವ ದಾಳಿಯ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಬೇಕು. ದೇಶ ಉಳಿದರೆ ಮಾತ್ರಇಂತಹ ಕರ‍್ಯಕ್ರಮಗಳನ್ನು ಮಾಡಲು ಸಾಧ್ಯ. ಎಂದು ತಿಳಿಸಿದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪಸ್ವಾಮಿ ಮಂದಿರ ಆಡಳಿತ ಟ್ರಸ್ಟ್ (ರಿ) ಮಾರ್ನಬೈಲು ಇದರ ಗೌರವಾಧ್ಯಕ್ಷರು ಸಂಜೀವಗುರು ಸ್ವಾಮಿ ಅಮ್ಟೂರು ಅವರು ವಹಿಸಿದ್ದರು. ವೇದಿಕೆಯಲ್ಲಿ ಮಂದಿರದಅಧ್ಯಕ್ಷರಾದ ರಮೇಶ್‌ಕರಿಂಗಾಣ, ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷರಾದ ಲಕ್ಷ್ಮೀ ವಿ.ಪ್ರಭು ಉಪಸ್ಥಿತರಿದ್ದರು. ಮಂದಿರದ ಪ್ರಧಾನ ಕರ‍್ಯದರ್ಶಿ ಕುಶಾಲಪ್ಪ ಅಮ್ಟೂರು ಕರ‍್ಯಕ್ರಮವನ್ನು ನಿರ್ವಹಿಸಿ ಸ್ವಾಗತಿಸಿದರು. ಕರ‍್ಯದರ್ಶಿ ಶೇಖರಕೊಟ್ಟಾರಿ ಧನ್ಯವಾದಗೈದರು.
ಪುಟಾಣಿಗಳ ಕೃಷ್ಣ-ರಾಧೆಯರ ವೇಷ, ಅಮ್ಟೂರು, ಗೋಳ್ತಮಜಲು ಮತ್ತು ಶಂಭೂರಿನ ಕುಣಿತ ಭಜನೆಯ 3 ತಂಡಗಳು, ಮುಕುಂದ ಟೈಗರ್ ತಂಡದಹುಲಿವೇಷ, ಶ್ರೀ ಕ್ಷೇತ್ರಕಟ್ಟೆಮಾರ್‌ನ ಚೆಂಡೆವಾದ್ಯ, ಹಾಗೂ ಶಿವಾಜಿ ಫ್ರೆಂಡ್ಸ್ ಅಮ್ಟೂರು ಇವರ ನಾಸಿಕ್ ಬ್ಯಾಂಡ್‌ಗಳ ವಾದನಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು. ಪೊಯ್ಯಕಂಡದಲ್ಲಿ ಎಲ್ಲರಿಗೂ ಉಪಾಹಾರ ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಉತ್ಸವದ ನಿಮಿತ್ತ ನಡೆದ ಅಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಅಂಗನವಾಡಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮತ್ತು ಕೃಷ್ಣ-ರಾಧೆವೇಷ ಧರಿಸಿದ ಎಲ್ಲಾ ಪುಟಾಣಿಗಳಿಗೆ ಬಹುಮಾನವನ್ನು ವೇದಿಕೆಯಲ್ಲಿ ನೀಡಲಾಯಿತು.