ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಡಬೆಟ್ಟು ಇಲ್ಲಿ ಶ್ರಮದಾನ ಮಾಡಲಾಯಿತು. ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣ ಸುತ್ತಮುತ್ತ ಬೆಲೆದ ಬಲ್ಲೆ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ
ಈ ಶ್ರಮದಾನದ ಕಾರ್ಯದಲ್ಲಿ ಶೌರ್ಯ ತಂಡದ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕೀ ರೇಖಾ ಪಿ, ಸದಸ್ಯರಾದ ಸಂಪತ್ ಶೆಟ್ಟಿ , ಮಹಾಬಲ ರೈ, ನಾರಾಯಣ್ ಶೆಟ್ಟಿ, ನಾರಾಯಣ ಪೂಜಾರಿ, ಅಶೋಕ ಬೊಲ್ಮಾರು, ಅಶೋಕ ಹಾರೊದ್ದು, ಲಕ್ಷ್ಮಣ, ರೋಹಿತ್ ಮೋಹನಂದ, ಶಶಿಕಲಾ ವಿನೋದ, ಪ್ರಿಯಾಂಕ, ವಸಂತ ಕಾಡಬೆಟ್ಟು ಶಾಲೆಯ ಶಿಕ್ಷಕಿಯರಾದ ಹರಿಣಾಕ್ಷಿ, ರತ್ನಾವತಿ ಉಪಸ್ಥಿತರಿದ್ದರು.
ಶ್ರಮದಾನಕ್ಕೆ ಬೇಕಾದ ವ್ಯವಸ್ಥೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಜಾನನ ಭಟ್, ಸದಸ್ಯರಾದ ಲೋಕೇಶ್ ಕೆ., ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಪ್ರಮೋದ್ ಕುಮಾರ್ ರೈ ವಿನ್ಸೆಂಟ ಮಧ್ವ,ನಾರಾಯಣ ಪೂಜಾರಿ ಅಲಂಪುರಿ ಸಹಕರಿಸಿದರು.