ಟೆಲ್ ಅವಿವ್/ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ (Israel Iran Conflict) ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ ಚಿನ್ನದ ಬೆಲೆ (Gold Rate) ಗಗನಕ್ಕೇರಿದೆ. ಕಳೆದ ಒಂದು ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 3,645 ರೂ. ಏರಿಕೆಯಾಗಿದ್ದರೆ, ದೇಶಿಯ ಮಾರುಕಟ್ಟೆಯಲ್ಲಿ 897 ರೂ.ಗಳಷ್ಟು ಹೆಚ್ಚಾಗಿದೆ. ಇದನ್ನೂ ಓದಿ : ಇಸ್ರೇಲ್ ಪ್ರಧಾನಮಂತ್ರಿಯಿಂದ ದೂರವಾಣಿ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MSX) ಇಂಡಿಯಾ ಲಿಮಿಟೆಡ್ನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಗಡಿ ದಾಟಿದೆ. ಇದೇ ಜೂನ್ 6ರಂದು 10 ಗ್ರಾಂ ಚಿನ್ನದ ಬೆಲೆ 97,036 ರೂ. ಇತ್ತು. ಇದು ಜೂನ್ 13ರಂದು ಮಾರುಕಟ್ಟೆ ಮುಕ್ತಾಯದ ವೇಳೆಗೆ 1,00,681 ರೂ.ಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದ್ರೆ ಕಳದೆ ಒಂದು ವಾರದಲ್ಲಿ 3,645 ರೂ. ಏರಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯು ದೇಶಿಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಭಾರತೀಯ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ನ IBJA.Com ಪ್ರಕಾರ, ಜೂನ್ 6ರಂದು 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 98,163 ರೂ. ಇತ್ತು. ಆದ್ರೆ ಜೂನ್ 13ರಂದು ಮಾರುಕಟ್ಟೆ ಅಂತ್ಯದ ವೇಳೆಗೆ 99,060 ರೂ. ಗಳಿಗೆ ತಲುಪಿತ್ತು. ಅಂದ್ರೆ ಕಳೆದ ಒಂದು ವಾರದಲ್ಲಿ 897 ರೂ.ಗಳಷ್ಟು ದರ ಏರಿಕೆ ಕಂಡಿದೆ. ಇದೀಗ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವುದರಿಂದ ಸೋಮವಾರ (ಜೂ.16) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಸದ್ಯದಲ್ಲಿ ಚಿನ್ನದ ದರ – ಪ್ರತಿ 10 ಗ್ರಾಂಗೆ
* 22 ಕ್ಯಾರೆಟ್ ಚಿನ್ನ – 96,680 ರೂ.
* 20 ಕ್ಯಾರೆಟ್ ಚಿನ್ನ – 88,160 ರೂ.
* 18 ಕ್ಯಾರೆಟ್ ಚಿನ್ನ – 80,240 ರೂ.
* 14 ಕ್ಯಾರೆಟ್ ಚಿನ್ನ – 63,890 ರೂ.