ಶಿಕಾರಿಪುರದಲ್ಲಿಂದು ನ್ಯಾಯಾಲಯದ ಆವರಣದಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ಧನಂಜಯ ಸರ್ಜಿ ಅವರ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತಯಾಚನೆ ಮಾಡಿದರು.
ಪದವೀಧರರ ಪ್ರಭಲ ಧ್ವನಿಯಾಗಿ ಹಾಗೂ ಅವರುಗಳ ಸಮಸ್ಯೆಗಳನ್ನು ಪರಿಷತ್ತಿನಲ್ಲಿ ಗಮನ ಸೆಳೆದು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಎನ್.ಡಿ.ಎ ಅಭ್ಯರ್ಥಿಗಳಿಗೆ ಬಲ ತುಂಬಲು ಪ್ರಥಮ ಪ್ರಾಶಸ್ತ್ಯತದ ಮತವನ್ನು ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನೈಋತ್ಯ ಪದವೀಧರರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಧನಂಜಯ ಸರ್ಜಿ, ವಕೀಲರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಶ್ರೀ ರುದ್ರಪ್ಪಯ್ಯ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಗುರುಮೂರ್ತಿ, ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್.ಡಿ ಬಳಿಗಾರ್, ಜಿಲ್ಲಾ ಉಪಾಧ್ಯಕ್ಷರಾದ ವೀರೇಂದ್ರ ಪಾಟೀಲ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗಾಯತ್ರಿದೇವಿ ಸೇರಿದಂತೆ ವಕೀಲ ಬಂಧುಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.