ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಜೊತೆಗೆ ಕಡಲಬ್ಬರವು ಜೋರಾಗಿದೆ. ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ಇದನ್ನೂ ಓದಿ : ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಬೋಟ್ ಗಳಲ್ಲಿ ಸಾರ್ವಜನಿಕರ ಸ್ಥಳಾಂತರ – ಇಬ್ಬರು ಸಾವು
ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ಈ ಘಟನೆ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ನೀರುಪಾಲಾದ ಮೀನುಗಾರರು . ಇದನ್ನೂ ಓದಿ : ಮಂಗಳೂರು: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತ ಒಂದೇ ಕುಟುಂಬದ ಮೂವರು ಸಾವು
ಯಶವಂತ ಹಾಗೂ ಕಮಲಾಕ್ಷ ಅವರು ಮೀನುಗಾರಿಕೆಗೆ (Fishing) ತೆರಳಿದ್ದಾಗ ಕಡಲ ಅಲೆಗಳ ಅಬ್ಬರಕ್ಕೆ ನಾಡದೋಣಿ ಪಲ್ಟಿಯಾಗಿದೆ. ನಾಡದೋಣಿ ಪಲ್ಟಿಯಾಗಿ ಇಬ್ಬರು ಮೀನುಗಾರರು ನೀರು ಪಾಲಾಗಿದ್ದಾರೆ. ಇದೀಗ ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ಬಂದು ಬಿದ್ದಿದೆ. ನೀರಿನಲ್ಲಿ ಕಣ್ಮರೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ : ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ನವೀನ್ ಕುಮಾರ್ ಎನ್‌ಕೌಂಟರ್