ಬಂಟ್ವಾಳ:ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಮದ್ಯವರ್ಜನ ಶಿಬಿರದ ಸಮಾಲೋಚನಾ ಸಭೆಯನ್ನು ಮಂಚಿ ಸಾಲೆತ್ತೂರು ವಲಯದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಎಸ್ ಆರ್ ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು,

ಸಭೆಯಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ , ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ,ವಲಯದ ಜನಜಾಗೃತಿ ಅಧ್ಯಕ್ಷರಾದ ಅರವಿಂದ ರೈ,ಸಾಲೆತ್ತೂರು ವಲಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ,ಮಂಚಿ ಒಕ್ಕೂಟದ ಅಧ್ಯಕ್ಷರಾದ ದಿವಾಕರ್ ನಾಯಕ್ ಉಪಸ್ಥಿತರಿದ್ದರು.ಇದನ್ನೂ ಓದಿ :“ಬಸವ ಜಯಂತಿ-2025” “ನಮ್ಮ ನಡೆ ಅನುಭವ ಮಂಟಪದ ಕಡೆ” ಕಾರ್ಯಕ್ರಮ ಉದ್ಘಾಟಿಸಿದ – ಸಿ.ಎಂ.

ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಪೂರ್ಣ ಮಾಹಿತಿಯನ್ನು ನೀಡಿದರು.

ಈ ಸಭೆಯಲ್ಲಿ ಮದ್ಯವರ್ಜನ ಶಿಬಿರದ ಸಮಿತಿ ರಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಎಸ್ ಆರ್ ಸತೀಶ್ಚಂದ್ರ, ಅಧ್ಯಕ್ಷರಾಗಿ ರಾಮಪ್ರಸಾದ್ ರೈ ತಿರುವಾಜೆ, ಕಾರ್ಯದರ್ಶಿಯಾಗಿ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ ಕೋಶಾಧಿಕಾರಿಯಾಗಿ ನಾರಾಯಣ ಶೆಟ್ಟಿ ಕುಲ್ಯಾರು. ಉಪಾಧ್ಯಕ್ಷರು, ಗೌರವ ಸಲಹೆಗಾರರು, ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ತಾಲೂಕಿನ ಒಕ್ಕೂಟದ ವಲಯ ಅಧ್ಯಕ್ಷರು, ಯುವಕ ಮಂಡಲ ಅದಕ್ಷರು, ಮಹಿಳಾ ಮಂಡಲ ಅಧ್ಯಕ್ಷರು, ಜನಜಾಗೃತಿ ವಲಯ ಅಧ್ಯಕ್ಷರು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು, ಭಜನಾ ಮಂಡಳಿ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು . ನಿಕಟ ಪೂರ್ವ ಅಧ್ಯಕ್ಷರು ಮತ್ತು ಪದಾಧಿಕಾರಿಗಳು. ಸೇವಪ್ರತಿನಿಧಿಗಳು.ಸದಸ್ಯರು ಉಪಸ್ಥಿತರಿದ್ದರು.

ಮಂಚಿ ವಲಯದ ಮೇಲ್ವಿಚಾರಕಿ ಶಶಿಕಲಾ ಸ್ವಾಗತಿಸಿ. ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ವಂದಿಸಿ. ಸಾಲೆತ್ತೂರು ಮೇಲ್ವಿಚಾರಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.